Advertisement

“ಮಿಕ್ಸೋಪತಿ ಇಲ್ಲ’ : ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ತರಬೇತಿ

01:18 AM Feb 25, 2021 | Team Udayavani |

ಪಣಜಿ “ಮಿಕ್ಸೋಪತಿ’ ಎಂಬ ಪರಿಕಲ್ಪನೆ ಇಲ್ಲ, ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ನಡೆಸುವ ತರಬೇತಿ ನೀಡಲಾಗುತ್ತದೆ ಎಂದು ಆಯುಷ್‌ ಸಚಿವ ಶ್ರೀಪಾದ್‌ ನಾಯಕ್‌ ಹೇಳಿದ್ದಾರೆ.

Advertisement

“ಮಿಕ್ಸೋಪತಿ’ ಅಲೋಪತಿ ವೈದ್ಯರು ನೀಡಿರುವ ಹೆಸರು. ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೂ ಅನುಮತಿ ನೀಡಿದ ಬಳಿಕ ಇದು ಚಲಾವಣೆಗೆ ಬಂದಿದೆ. ಇದಕ್ಕೆ ಉತ್ತರ ನೀಡಿರುವ ಶ್ರೀಪಾದ್‌ ನಾಯಕ್‌, ಇಂಥ ಪರಿಕಲ್ಪನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಲೋಪತಿಗೆ ಸಹಕಾರಿಯಾಗಲಿ ಎಂಬ ಕಾರಣದಿಂದ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಲಾಗಿದೆ. ಇಲ್ಲಿ ಪೈಪೋಟಿ ಇಲ್ಲ. ಎರಡೂ ವೈದ್ಯಕೀಯ ಪದ್ಧತಿಗಳು ಪೂರಕವಾಗಿರಲಿವೆ. ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಯ ತರಬೇತಿ ನೀಡಲಾಗುತ್ತದೆ. ತರಬೇತಿಯ ಬಳಿಕ ಒಂದು ವರ್ಷ ಇಂಟರ್ನ್ಶಿಪ್‌ ಇರಲಿದೆ ಎಂದರು. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಗುಣ ಹೊಂದಿದ್ದು , ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next