Advertisement

ಸುರೇಶ ಜಾಂಗೆ ಬೆಸ್ಟ್‌ಅಕಾಡೆಮಿಕ್‌ ಲೈಬ್ರೇರಿಯನ್‌

10:22 AM Nov 30, 2017 | Team Udayavani |

ಕಲಬುರಗಿ: ಭಾರತೀಯ ಗ್ರಂಥಾಲಯ ಒಕ್ಕೂಟ (ಐಎಲ್‌ಎ)ದಿಂದ ನೀಡುವ “ಗಿದ್ವಾನಿ ದೇಶಪಾಂಡೆ ಬೆಸ್ಟ್‌ ಅಕಾಡೆಮಿಕ್‌ ಲೈಬ್ರೆರಿಯನ್‌ ಅವಾರ್ಡ್‌ 2017′ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸಂಪನ್ಮೂಲ ಕೇಂದ್ರ
ಮತ್ತು ಡಿಜಿಟಲ್‌ ಗ್ರಂಥಾಲಯದ ಉಪ ಗ್ರಂಥಪಾಲಕ ಡಾ| ಸುರೇಶ ಜಾಂಗೆ ಭಾಜನರಾಗಿದ್ದಾರೆ.

Advertisement

ಉತ್ತರ ಪ್ರದೇಶದ ಲಕ್ನೋದ ಬಾಬಾಸಾಹೇಬ ಭೀಮರಾವ್‌ ಅಂಬೇಡ್ಕರ್‌ ವಿಶ್ವವಿದ್ಯಾಲಯದಲ್ಲಿ ಭಾರತೀಯ ಗ್ರಂಥಾಲಯ ಒಕ್ಕೂಟ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ 95 ಸಂಶೋಧನಾತ್ಮಕ ಲೇಖನಗಳು, ಐದು ಮಂದಿ ಪಿಎಚ್‌.ಡಿ ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವುದು, ಲಂಡನ್‌ನ ಈಸ್ಟ್‌ ಯುನಿರ್ವಸಿಟಿಯಿಂದ ಫೆಲೋಶಿಪ್‌ ಮಾಡಿರುವುದು ಸೇರಿದಂತೆ ಗ್ರಂಥಾಲಯ ವಿಜ್ಞಾನ ವಿಭಾಗದ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next