Advertisement

ವಾಲ್ಮೀಕಿ ಹಗರಣ: ನಮಗೆ ಸಿಗಬೇಕಾದ ಸೌಲಭ್ಯದ ಹಣ ಒದಗಿಸಿ ಇಲ್ಲದಿದ್ದರೆ… ಸುರೇಶ ಡೊಣ್ಣಿ ಕಿಡಿ

12:46 PM Jul 15, 2024 | Team Udayavani |

ಕೊಪ್ಪಳ: ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣದಿಂದ ನಮಗೆ ದೊರೆಯುವ ಸೌಲಭ್ಯದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಸರಕಾರ ಕೂಡಲೇ ನಮ್ಮ ನಿಗಮಕ್ಕೆ ಸಿಗಬೇಕಾದ ಹಣವನ್ನು ಕೂಡಲೇ ನೀಡುವಂತೆ ಕೊಪ್ಪಳದ ಅಖಿಲ ಕರ್ನಾಟಕ ವಾಲ್ಮೀಕಿ ಸಂಘದ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ ಹೇಳಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು ಇದರಿಂದ ನಮಗೆ ದೊರೆಯುವ ಸೌಲಭ್ಯದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಇದರಿಂದ ನಮ್ಮ ಸಮಾಜಕ್ಕೆ ಸೌಲಭ್ಯ ಇಲ್ಲದಂತಾಗಿದೆ, ಹಾಗಾಗಿ ಸರಕಾರ ಕೂಡಲೇ ನಮ್ಮ ನಿಗಮಕ್ಕೆ 187 ಕೋಟಿ ನೀಡಬೇಕು ಅಲ್ಲದೆ ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಯಾರೆಲ್ಲ ಈ ಪ್ರಕರಣದಲ್ಲಿ ಇದ್ದಾರೆ ಅವರೆಲ್ಲರಿಗೂ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

ಹಣಕಾಸು ಸಚಿವರಿಂದ ಈ ಹಣ ಬಿಡುಗಡೆಯಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆ, ನಿಗಮಕ್ಕೆ ಮತ್ತೆ ಅನುದಾನ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ನಮ್ಮ ಸಮಾಜದ ಬೀದಿ ವ್ಯಾಪಾರಿಗಳಿಗೆ, ಬೋರವೆಲ್ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಹಣವಿಲ್ಲ, ನಾವು ಸಾಲ ಪಡೆಯಲು ನೂರಾರು ಕಾನೂನು ಹೇಳುತ್ತಾರೆ, ಆದರೆ ಏನೂ ಇಲ್ಲದೇ ಹಣ ವರ್ಗಾವಣೆ ಮಾಡಲಾಗಿದೆ, ನಮ್ಮ‌ ಸಮಾಜದ ಶಾಸಕರು ತಕ್ಷಣ ಈ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಾಜದ ಶರಣಪ್ಪ ನಾಯಕ್, ಹುಲಿಗೇಶ ಮೇಟಿ, ರವಿಕುಮಾರ್ ಬನ್ನಿಕೊಪ್ಪ, ಮಲ್ಲಿಕಾರ್ಜುನ ಕಲ್ಲನವರ್ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: Udupi: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಟ್ವೀಟ್… ವೈದ್ಯನ ವಿರುದ್ಧ ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next