Advertisement

ಚಿತ್ರಗಾರಿಕೆ: ಮಣಿಪಾಲದ ಸುರೇಶ್ ಶೆಣೈ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆ

12:08 PM Jan 13, 2022 | Team Udayavani |

ಉಡುಪಿ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಚೀಫ್ ಮ್ಯಾನೇಜರ್ ಆಗಿರುವ ಸುರೇಶ್ ಶೆಣೈ ಅವರು ಪ್ರತಿಷ್ಟಿತ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ..

Advertisement

ಭಾರತದಲ್ಲಿ ಬಣ್ಣ ಬಳಸದೆ ಹಳೆಯ ಮ್ಯಾಗಜೀನ್ ಕಾಗದಗಳನ್ನು ಬಳಸಿ ತಯಾರಿಸುವ ಚಿತ್ರಗಾರಿಕೆಯಾಗಿರುವ (Collage Art- Painting without Paint) ಗರಿಷ್ಟ ಚಿತ್ರಗಾರಿಕೆ ಮಾಡಿರುವ ಬಗ್ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.

ಸಾಧನೆಗಾಗಿ ಶೆಣೈ ಅವರು ಅವರ ಹೆತ್ತವರು ಅವರ ಪತ್ನಿ, ಅವರ ಪುತ್ರ, ಅವರ ಹಿರಿಯ ಸಹೋದರ ಗಣೇಶ್ ಶೆಣೈ, ಅವರ ಅತ್ತೆ ಹಾಗೂ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ ಬೆಂಬಲಿಸಿ ಪ್ರೋತ್ಸಾಹ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಬಣ್ಣ ಬಳಸದೆ ಹಳೆಯ ಮ್ಯಾಗಝೀನ್ ಕಾಗದಗಳ ಮೂಲಕ ಚಿತ್ರ ಸೃಷ್ಟಿಸುವ ಕಲೆಯನ್ನು ಅವರ ತಂದೆ ಹಿರಿಯ ಕಲಾವಿದರಾಗಿದ್ದ, ಇಂತಹ ಕಲೆಯಲ್ಲಿ ಪರಿಣಿತರಾಗಿದ್ದ ದಿ. ಕೆಪಿ ಶೆಣೈ ರವರೊಂದಿಗೆ ಸುಮಾರು 40 ವರ್ಷಗಳ ಹಿಂದೆ ಪ್ರಾರಂಭಿಸಿದ್ದರು.

ಈ ಚಿತ್ರ ಸೃಷ್ಟಿಸುವ ಚಿತ್ರಗಾರಿಕೆಯು ಮೂರು ಆಯಾಮಗಳುಳ್ಳ ಪ್ರಭಾವದಂತೆ ಗೋಚರಿಸುವ ಚಿತ್ರ ಕಲೆಯಾಗಿದ್ದು ಇದನ್ನು ಮತ್ತೊಮ್ಮೆ ಯಾರು ಕೂಡ ಕಾಪಿ ಮಾಡಲು ಸಾಧ್ಯವಿಲ್ಲ ಮತ್ತು ಇದನ್ನು ಮರುಸೃಷ್ಟಿಸಲು ಮೂಲ ಕಲಾವಿದನಿಂದಲೂ ಕೂಡ ಅಸಾಧ್ಯವಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next