Advertisement

ಸುರೇಶ್‌ ರೈನಾಗೆ ಕೇಶ ವಿನ್ಯಾಸ ಮಾಡಿದ ಪತ್ನಿ ಪ್ರಿಯಾಂಕ 

06:17 PM Apr 13, 2020 | keerthan |

ನವದೆಹಲಿ: ಸದ್ಯ ಕೋವಿಡ್-19 ಲಾಕ್ ಡೌನ್ ಇರುವ ಕಾರಣ ಹಲವರು ಹಲವು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಖ್ಯಾತ ಕ್ರಿಕೆಟಿಗ ಸುರೇಶ್‌ ರೈನಾಗೆ ಅವರ ಪತ್ನಿ ಪ್ರಿಯಾಂಕ ರೈನಾ ಕೇಶ ವಿನ್ಯಾಸ ಮಾಡಿದ್ದಾರೆ.

Advertisement

ಸದ್ಯ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಯಾವ ಕೇಶ ವಿನ್ಯಾಸಕಾರರು ಸುರೇಶ್‌ ರೈನಾಗೆ ಸಿಕ್ಕಿಲ್ಲ. ಹೀಗಾಗಿ ಖುದ್ದು ಅವರ ಪತ್ನಿ ಪ್ರಿಯಾಂಕ ಕತ್ತರಿ ಹಿಡಿದು ಗಂಡನಿಗೆ ಕೇಶ ವಿನ್ಯಾಸ ಮಾಡಿದ್ದಾರೆ.

ಹೊಸ ಕೇಶ ವಿನ್ಯಾಸವನ್ನು ಸುರೇಶ್‌ ರೈನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಪ್ರಿಯಾಂಕಗೆ ಧನ್ಯವಾದ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಶ್ಕಾ ಕೇಶ ವಿನ್ಯಾಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next