Advertisement

ಧೋನಿ ಹಾದಿ ತುಳಿದ ರೈನಾ

11:01 PM Aug 15, 2020 | mahesh |

ಚೆನ್ನೈ: ಭಾರತೀಯ ಕ್ರಿಕೆಟ್‌ ಕಂಡ ಅತ್ಯುತ್ತಮ ಎಡಗೈ ಆಟಗಾರ, ಅದ್ಭುತ ಫೀಲ್ಡರ್‌, ಇದಕ್ಕೂ ಮಿಗಿಲಾಗಿ ಧೋನಿ ಅವರ ಅಚ್ಚುಮೆಚ್ಚಿನ ಗೆಳೆಯ ಸುರೇಶ್‌ ರೈನಾ ಕೂಡ ಶನಿವಾರ ತಮ್ಮ ಅಂತಾರಾಷ್ಟ್ರೀಯ ಬದುಕಿಗೆ ಗುಡ್‌ಬೈ ಹೇಳಿದರು. ಅವರು ತಮ್ಮ ವಿದಾಯವನ್ನು ಧೋನಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. “ನಿಮ್ಮ ಜತೆಗೂಡಿ ಆಡಿದ ಆಟ ಬಹಳ ಪ್ರೀತಿಯ ಸಂಗತಿಯಾಗಿತ್ತು. ನಿಮ್ಮ ಜತೆಗಿನ ಈ ಪ್ರಯಾಣದಲ್ಲಿ ನಾನಿದ್ದೇನೆಂಬುದನ್ನು ಹೃದಯ ತುಂಬಿ ಹೇಳುತ್ತಿದ್ದೇನೆ. ಥ್ಯಾಂಕ್ಯೂ ಇಂಡಿಯಾ, ಜೈ ಹಿಂದ್‌…’ ಎಂದು ಸುರೇಶ್‌ ರೈನಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿ ಸಿದರು.

Advertisement

ಅಪರೂಪದ ಸಾಧಕ
ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿ ಸೆಂಚುರಿ ಬಾರಿಸಿದ ಭಾರತದ ಏಕೈಕ ಆಟಗಾರನಾಗಿರುವ ಸುರೇಶ್‌ ರೈನಾ 18 ಟೆಸ್ಟ್‌, 226 ಏಕದಿನ ಹಾಗೂ 78 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹತ್ತಿರ ಹತ್ತಿರ ಎಂಟು ಸಾವಿರದಷ್ಟು ಅಂತಾರಾಷ್ಟ್ರೀಯ ರನ್‌ ಪೇರಿಸಿ ದ್ದಾರೆ. ಐಪಿಎಲ್‌ನಲ್ಲಿ ದ್ವಿತೀಯ ಸರ್ವಾಧಿಕ ರನ್‌ ಬಾರಿಸಿದ ದಾಖ ಲೆಗೆ ರೈನಾ ಪಾತ್ರರು. 33.34ರ ಸರಾಸರಿಯಲ್ಲಿ, ಒಂದು ಶತಕ ಹಾಗೂ 38 ಅರ್ಧ ಶತಕಗಳೊಂದಿಗೆ 5,368 ರನ್‌ ರಾಶಿ ಹಾಕಿದ್ದಾರೆ.

2011ರ ವಿಶ್ವಕಪ್‌ ಗೆಲುವಿನಲ್ಲಿ ಸುರೇಶ್‌ ರೈನಾ ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ. ಆಸ್ಟ್ರೇಲಿಯ ಎದುರಿನ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿ ಮಿಂಚಿನ ಆಟದ ಮೂಲಕ ರೈನಾ ಗೆಲುವಿನ ರೂವಾರಿಯಾಗಿದ್ದರು. 2005ರಲ್ಲಿ ಲಂಕಾ ಪರ ಏಕದಿನ ಪದಾರ್ಪಣೆ ಮಾಡುವಾಗ ರೈನಾಗೆ 19 ವರ್ಷ. ಆದರೆ ಟೆಸ್ಟ್‌ ಆಡಲು 5 ವರ್ಷ ಕಾಯಬೇಕಾಯಿತು. ಟೆಸ್ಟ್‌ನಲ್ಲಿ ರೈನಾ ಗಳಿಸಿದ್ದು 768 ರನ್‌.ಏಕದಿನದಲ್ಲಿ 5,615 ರನ್‌ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next