ಬೆಂಗಳೂರು: ಕೋವಿಡ್ -19 ಪೂರ್ವ ಮತ್ತು ಕೋವಿಡ್ -19 ಅನಂತರದ ದಿನಗಳು ಮುಂದಿನ ದಿನಗಳಲ್ಲಿ ನಮ್ಮ ಜೀವನ
ಶೈಲಿಯಾಗುವ ಕಾರಣ ಇದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಈ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದಾಗಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಕೋವಿಡ್ -19 ವಾರಿಯರ್ಸ್‌ನ್ನು ಪುಷ್ಪಾ ರ್ಚನೆಯ ಮೂಲಕ ಸಮ್ಮಾನಿಸಿ ಅವರು ಮಾತನಾಡಿದರು.
ಕೋವಿಡ್ -19 ಮಹಾಮಾರಿ ಕರ್ನಾಟಕದಲ್ಲಿ ಹೆಚ್ಚಿನ ನಿಯಂತ್ರಣ ದಲ್ಲಿರುವುದಕ್ಕೆ ಹಗಲಿರುಳೆನ್ನದೇ ಜನ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನಮ್ಮೆಲ್ಲ ಕೋವಿಡ್ -19ವಾರಿಯರ್ಸ್ ನೇರ ಕಾರಣವೆಂದ ಅವರು, ಕೋವಿಡ್ -19 ಒಡ್ಡುತ್ತಿರುವ ಬಹುಮುಖೀಯಾದ ಸವಾಲುಗಳನ್ನು ಎದುರಿಸಲು ಪ್ರತಿ ವ್ಯಕ್ತಿಯೂ ತಮ್ಮ ಆಚಾರ ವಿಚಾರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದುಕೊಳ್ಳಬೇಕು. ವೈಯಕ್ತಿಕ ಸ್ವತ್ಛತೆ, ಸಮುದಾಯ ಸ್ವತ್ಛತೆಯಷ್ಟೇ ಸಾಮಾಜಿಕ ಸ್ವಾಸ್ಥ್ಯವನ್ನು ಪ್ರೇರೇಪಿ ಸುತ್ತದೆನ್ನುವುದನ್ನು ನೆನಪಿನಲ್ಲಿಡಬೇಕು ಎಂದರು.
ನಮ್ಮ ನಡೆನುಡಿಗಳ ಮೂಲಕ ನಮ್ಮೆಲ್ಲರ ಬದುಕನ್ನು ಪೊರೆಯು ತ್ತಿರುವ ಕೋವಿಡ್ -19 ವಾರಿಯರ್ಸ್‌ರನ್ನು ಗೌರವಿಸುವುದನ್ನು ನಾವೆಲ್ಲ ಕಲಿತಲ್ಲಿ ಮಾತ್ರ ನಾವು ಈ ಕೋವಿಡ್ -19 ಮಹಾ ವಿಶ್ವಯುದ್ಧವನ್ನು ಗೆಲ್ಲಲು ಸಾಧ್ಯ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.