Advertisement

ಸೆಪ್ಪೆಂಬರ್ ಹೊತ್ತಿಗೆ ಕೋವಿಡ್ ಲಸಿಕೆ ಹಾಕಿಸಿ 3ನೇ ಅಲೆ ತಡೆಗಟ್ಟಿ: ಸುರೇಶ್ ಕುಮಾರ್

07:59 PM Jul 11, 2021 | Team Udayavani |

ಬೆಂಗಳೂರು : ರಾಜಾಜಿನಗರ ವಿಧಾನಸಭಾ , ಕ್ಷೇತ್ರದ ಬಸವೇಶ್ವರ ನಗರ, ಶ್ರೀರಾಮ ಮಂದಿರ, ಹಾಗೂ ರಾಜಾಜಿ ನಗರದ ಆಟದ ಮೈದಾನದಲ್ಲಿ ಕೂಲಿ ಕಾರ್ಮಿಕರು ಮತ್ತು ಮನೆ ಕೆಲಸದವರು ,ದೇವಸ್ಥಾನ ಸಿಬ್ಬಂದಿಗಳು ,ವಿಕಲಚೇತನರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ಸ್ಥಳೀಯ ಶಾಸಕರು, ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ವಿತರಿಸಿದರು.

Advertisement

ಇದೇ ಸಂದರ್ಭದಲ್ಲಿ ಸಚಿವರಾದ ಸುರೇಶ್ ಕುಮಾರ್ ರವರು ಮಾತನಾಡಿ, ಕೊರೋನ ವೈರಸ್ ಬರದಂತೆ ತಡೆಗಟ್ಟಲು ಕೊವಿಡ್-19ಲಸಿಕೆ ಪ್ರತಿಯೊಬ್ಬರು ಹಾಕಿಸಿಕೊಳ್ಳಬೇಕು. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಪ್ಪೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ ಹಾಕಲಾಗುವುದು .

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಜನರ ಸಹಕಾರದಿಂದ ಕೊರೋನ ವೈರಸ್ ಹರಡದಂತೆ ತಡೆಯಬಹುದು . ಮಕ್ಕಳಿಗೆ ಕೊವಿಡ್ ಲಸಿಕೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ ಇನ್ನ ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕೊವಿಡ್-19ಲಸಿಕೆ ಬರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಸಚಿವರಾದ ಸುಧಾಕರ್ ರವರು ಹೇಳಿದ್ದಾರೆ .

ಕೊವಿಡ್ ನಿಯಮಾವಳಿ ಪಾಲಿಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್ ಮಂಡಲದ ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್  ಬಿ.ಜೆ.ಪಿ.ಮುಖಂಡರುಗಳಾದ ಅನಿಲ್ ರಂಗಣ್ಣ, ,ವೆಂಕಟೇಶ್ ಬಾಬು,ಮೋಹನ್ ರಾಜ್, ಸೂರಜ್ ವಾರ್ಡ್ ಅಧ್ಯಕ್ಷರಾದ ಕಿರಣ್ ರವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next