Advertisement

ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

12:17 PM Jan 25, 2021 | keerthan |

ಬೆಂಗಳೂರು: ಹೊಸನಗರ ತಾಲೂಕಿನ ಹನಿಯಾ ಗ್ರಾಮದ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳ ಮರುಎಣಿಕೆಯಲ್ಲಿ ಕಡಿಮೆ ಅಂಕ ನೀಡಲಾದ ಪ್ರಕರಣಕ್ಕೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ತಕ್ಷಣವೇ ವರದಿ ಸಲ್ಲಿಸಬೇಕೆಂದು ಸಚಿವ ಎಸ್. ಸುರೇಶ್ ಕುಮಾರ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Advertisement

ಪಿಯು ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಾಗ ತನಗೆ 100 ಅಂಕ ಬರಬೇಕಿತ್ತೆಂಬ ಉತ್ತರಪತ್ರಿಕೆ ಛಾಯಾ ಪತ್ರಿಕೆ ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ತನಗೆ ಒಂದು ಅಂಕ ಕಡಿಮೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದಾಗ 88 ಅಂಕಗಳು ಬಂದಿದ್ದವು. ಈ ಕುರಿತು ವಿದ್ಯಾರ್ಥಿನಿ ರಾಜ್ಯ ಹೈಕೋರ್ಟ್ ಮೊರೆ ಹೋದಾಗ ಹೈಕೋರ್ಟ್ ಮರುಎಣಿಕೆಗೆ ಆದೇಶಿಸಿದ್ದು, ಆ ನಂತರ 100 ಅಂಕಗಳು ಬಂದಿದ್ದವು.

ಇದನ್ನೂ ಓದಿ:ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!

ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲು ಸಂಬಂಧಿಸಿದವರ ವಿವರಗಳೊಂದಿಗೆ ಎರಡು ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಸಚಿವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

Advertisement

ವಿದ್ಯಾರ್ಥಿನಿಗೆ ಕೊನೆಗಾದರೂ ನ್ಯಾಯದೊರೆತದ್ದು ಸಂತಸ ಸಂಗತಿಯಾಗಿದ್ದರೂ ಸಹ ಇಲಾಖೆ ಅಧಿಕಾರಿಗಳ ಕರ್ತವ್ಯ ಚ್ಯುತಿಯಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವಂತಾಗಿದ್ದು, ವ್ಯವಸ್ಥೆ ಕುರಿತು ಭರವಸೆ ಕಳೆದುಕೊಳ್ಳುವಂತಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಬರಬೇಕಾದ ಇಲಾಖೆ ಆಕೆಯ ಆತ್ಮವಿಶ್ವಾಸ ಕಸಿಯುವ ಕೆಲಸ ಮಾಡಿದ್ದು, ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದ್ದು, ತಕ್ಷಣವೇ ಈ ಕುರಿತು ವರದಿ ಸಲ್ಲಿಸಬೇಕೆಂದು ಸಚಿವರು ಟಿಪ್ಪಣಿಯಲ್ಲಿ ಪಿಯು ನಿರ್ದೇಶಕರಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next