ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.
ಅನುಷಾಗೆ ಕರೆ ಮಾಡಿದ ಸಚಿವರು, ಪ್ರಧಾನಿಯವರ ಜೊತೆ ಮಾತನಾಡಲು ನೀನು ಆಯ್ಕೆಯಾಗಿರುವುದು ನಮಗೆ ಖುಷಿಯಾಗಿದೆ. ನೀನು ಶಾಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಬೇಕು ಎಂದು ಹೇಳಿದರು.
ಇದನ್ನೂ ಓದಿ:ಪ್ರಧಾನಿ “ಪರೀಕ್ಷಾ ಪೇ ಚರ್ಚಾ’ : ಚಾರಮಕ್ಕಿ ಶಾಲೆಯ ಅನುಷಾ ಆಯ್ಕೆ
‘ಪರೀಕ್ಷಾ ಪೇ ಚರ್ಚಾ’ ಗೆ ದೇಶಾದ್ಯಂತ ಆಯ್ಕೆಯಾಗಿರುವ ಮೂವತ್ತು ಶಾಲೆಗಳಲ್ಲಿ ಆರ್ಡಿ- ಅಲ್ಬಾಡಿ ಶಾಲೆಯೂ ಒಂದು. ಕರ್ನಾಟಕದಿಂದ ಬೆಂಗಳೂರಿನ ಒಂದು ಮತ್ತು ಆರ್ಡಿ ಶಾಲೆ ಮಾತ್ರ ಆಯ್ಕೆಯಾಗಿವೆ.
ಗುಡ್ಡೆಯಂಗಡಿ ನಿವಾಸಿ ಕೃಷ್ಣ ಕುಲಾಲ್-ಜಯಲಕ್ಷ್ಮೀ ದಂಪತಿಯ ಪುತ್ರಿ ಅನುಷಾ ಅಲ್ಬಾಡಿ -ಆರ್ಡಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಈಕೆ ಭವಿಷ್ಯದಲ್ಲಿ ಎಂಜಿನಿಯರಿಂಗ್ ಮಾಡುವ ಕನಸು ಹೊಂದಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ಶುಲ್ಕಕ್ಕೆ ಒತ್ತಡ: ಸಂವೇದನೆಯ ವರ್ತನೆ ಇಂದಿನ ಅಗತ್ಯ ಎಂದ ಸಚಿವ ಸುರೇಶ್ ಕುಮಾರ್