Advertisement

ವಿರಾಟ್‌ ಕೊಹ್ಲಿಯ ಬಾಲ್ಯದ ಕೋಚ್‌ ಸುರೇಶ್‌ ಬಾತ್ರಾ ನಿಧನ

10:25 PM May 22, 2021 | Team Udayavani |

ಹೊಸದಿಲ್ಲಿ : ವಿರಾಟ್‌ ಕೊಹ್ಲಿ ಅವರ ಬಾಲ್ಯದ ದಿನಗಳ ಕ್ರಿಕೆಟ್‌ ಕೋಚ್‌ ಸುರೇಶ್‌ ಬಾತ್ರಾ (53) ಇನ್ನಿಲ್ಲ. ಈ ಸುದ್ದಿ ವಿಳಂಬವಾಗಿ ತಿಳಿದು ಬಂದಿದೆ. ಹಿರಿಯ ಪತ್ರಕರ್ತ ವಿಜಯ್‌ ಲೋಕಪಳ್ಳಿ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.
ಆರೋಗ್ಯವಾಗಿಯೇ ಇದ್ದ ಸುರೇಶ್‌ ಬಾತ್ರಾ ಕಳೆದ ಗುರುವಾರ ಬೆಳಗ್ಗೆ ದೇವರ ಪೂಜೆ ಮುಗಿಸಿದ ಬಳಿಕ ದಿಢೀರ್‌ ಕುಸಿದು ಬಿದ್ದು ಮೃತಪಟ್ಟರೆಂದು ಲೋಕಪಳ್ಳಿ ಮಾಹಿತಿ ನೀಡಿದರು.

Advertisement

ಬಾತ್ರಾ ಮಹತ್ವ ಪಾತ್ರ
ವಿರಾಟ್‌ ಕೊಹ್ಲಿ ಆರಂಭದ ದಿನಗಳಲ್ಲಿ “ವೆಸ್ಟ್‌ ಡೆಲ್ಲಿ ಕ್ರಿಕೆಟ್‌ ಅಕಾಡೆಮಿ’ಗೆ ಕೋಚಿಂಗ್‌ಗಾಗಿ ಬರುತ್ತಿದ್ದಾಗ ಸುರೇಶ್‌ ಬಾತ್ರಾ ಅವರೇ ಕೋಚಿಂಗ್‌ ನೀಡಿದ್ದರು. ಆಗ ಅವರು ರಾಜ್‌ಕುಮಾರ್‌ ಶರ್ಮ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಿರಾಟ್‌ ಕೊಹ್ಲಿ ಇಂದು ವಿಶ್ವ ದರ್ಜೆಯ ಕ್ರಿಕೆಟಿಗನಾಗಿ ರೂಪುಗೊಳ್ಳುವಲ್ಲಿ ಸುರೇಶ್‌ ಬಾತ್ರಾ ಅವರ ಪಾಲು ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಟ್ವೀಟ್‌ ಮಾಡಿದ ರಾಜ್‌ಕುಮಾರ್‌ ಶರ್ಮ, “ನನ್ನ ಕಿರಿಯ ಸಹೋದರನನ್ನು ಕಳೆದುಕೊಂಡೆ. 1985ರಿಂದಲೂ ನನ್ನ ಒಡನಾಡಿಯಾಗಿದ್ದ. ಎಂದು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :ಕೊಲೆ ಪ್ರಕರಣ: ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್‌ ಬಂಧನ

ವಿರಾಟ್‌ ಕೊಹ್ಲಿ ಸೇರಿದಂತೆ ಅನೇಕ ಮಂದಿ ಕ್ರಿಕೆಟಿಗರನ್ನು ರೂಪುಗೊಳಿಸಿದ ಹಿರಿಮೆ ಸುರೇಶ್‌ ಬಾತ್ರಾ ಅವರದು. ಇದಕ್ಕೊಂದು ತಾಜಾ ಉದಾಹರಣೆ, 2018ರ ಅಂಡರ್‌-19 ವಿಶ್ವಕಪ್‌ ವಿಜೇತ ಭಾರತ ತಂಡದ ಸದಸ್ಯ ಮನೋಜ್‌ ಕಾರ್ಲಾ. ಆಸ್ಟ್ರೇಲಿಯ ವಿರುದ್ಧದ ಫೈನಲ್‌ ಹಣಾಹಣಿಯಲ್ಲಿ ಆರಂಭಕಾರ ಕಾರ್ಲಾ ಅಜೇಯ 101 ರನ್‌ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next