Advertisement

ಸುರತ್ಕಲ್‌ ಟೋಲ್‌ ನವೆಂಬರ್‌ನಲ್ಲಿ ತೆರವು : ಸಚಿವ ಸುನಿಲ್‌ ಕುಮಾರ್‌

05:31 PM Oct 22, 2022 | Team Udayavani |

ಉಡುಪಿ: ಸುರತ್ಕಲ್‌ ಟೋಲ್‌ಗೇಟ್‌ ಅನ್ನು ನವೆಂಬರ್‌ ಅಂತ್ಯದಲ್ಲಿ ತೆರವು ಮಾಡಲಾಗುವುದು. ತೆರವು ಮಾಡುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನದ ಸಹಯೋಗದಲ್ಲಿ ಶನಿವಾರ ನಡೆದ  ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ತಡವಾಗಿ ಅರಿವಿಗೆ ಬಂದಿದೆ. ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿದ್ದರೂ ಗಾಂಧಿ ಕುಟುಂಬದ ಕಪಿಮುಷ್ಠಿಯಲ್ಲೇ ಅಧಿಕಾರ ಇರಲಿದೆ. ಮಲ್ಲಿಕಾರ್ಜುನ ಖರ್ಗೆಯವರು ನೆಪಮಾತ್ರಕ್ಕೆ ಅಧ್ಯಕ್ಷರಾಗಿರಲಿದ್ದಾರೆ. ಅಧಿಕಾರವನ್ನು ಗಾಂಧಿ ಕುಟುಂಬವೇ ನಿರ್ವಹಿಸಲಿದೆ. ಭಾರತ್‌ ಜೋಡೋ ಹೆಸರಿನಲ್ಲಿ ಕರ್ನಾಟಕದಲ್ಲಿ 21 ನಾಟಕ ಆಡಿದ್ದಾರೆ. ಇದು ಮುಂದಿನ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಬಿಜೆಪಿ ಸದಾ ಹೊಸ ಪ್ರಯೋಗವನ್ನು ಮಾಡುತ್ತಲೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್‌ ನೀಡುವುದು ಪಕ್ಷ ನಿರ್ಧಾರವಾಗಿದೆ. ಮಿಷನ್‌ 150 ಸಾಧಿಸಲಿದ್ದೇವೆ. ಇದಕ್ಕೆ ಬೇಕಾದ ತಯಾರಿಗಳು ಪಕ್ಷದಲ್ಲಿ ನಡೆಯುತ್ತಿದೆ. ಪಕ್ಷದ ಜವಾಬ್ದಾರಿ ಹಂಚಿಕೆಯಲ್ಲಿ ಮಹಿಳೆಯರಿಗೂ ಶೇ.33ರಷ್ಟು ಮೀಸಲಾತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಕನ್ನಡ  ಕಡ್ಡಾಯ

ಕನ್ನಡ ಮಾಧ್ಯಮ ಕಡ್ಡಾಯ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಈ ಬಗ್ಗೆ ಸಾರ್ವಜನಿಕರ ಚರ್ಚೆ ಆಗುತ್ತಿದೆ. ಸಾಹಿತಿಗಳು, ವಿವಿಧ ಕ್ಷೇತ್ರದ ಪ್ರಮುಖರು, ಸಾರ್ವಜನಿಕರಿಂದ ಬರುವ ಪ್ರತಿಕ್ರಿಯೆಗಳ ಆಧಾರದಲ್ಲಿ ಮಸೂದೆಗೆ ಸೂಕ್ತ ರೂಪ ನೀಡಲಿದ್ದೇವೆ. ಶಿಕ್ಷಣ, ಆಡಳಿತ, ಉದ್ಯಮ, ಕಾನೂನು ಹೀಗೆ ಎಲ್ಲ ವಲಯದಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಸದುದ್ದೇಶದಿಂದ ಈ ಮಸೂದೆ ತರಲಿದ್ದೇವೆ ಎಂದರು.

Advertisement

ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗ

ಕರಾವಳಿಗರು ನಂಬಿಕೆ, ಶ್ರದ್ಧೆ, ಸಂಸ್ಕೃತಿಯ ಮೇಲೆ ಬದುಕುತ್ತಿರುವವರು. ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಸಂಸ್ಕೃತಿ, ನಂಬಿಕೆ, ಶ್ರದ್ಧೆ ಇಲ್ಲದವರು ಮಾತ್ರ ಇದರ ವಿರುದ್ಧ ಮಾತನಾಡಲು ಸಾಧ್ಯ. ಕಾಂತಾರ ಸಿನೆಮಾ ನಮ್ಮ ಸಂಸ್ಕೃತಿಯನ್ನು ಉತ್ತಮ ರೀತಿಯಲ್ಲಿ ಜನರಿಗೆ ಪರಿಚಯ ಮಾಡುತ್ತಿದೆ ಎಂದರು.

ಕಾರ್ಕಳದ ಆನೇಕೆರೆ ಒತ್ತುವರಿ ಆಗುತ್ತಿಲ್ಲ. ಅದರ ಸೌಂದರ್ಯ ಹೆಚ್ಚಿಸಲು ಕಾಮಗಾರಿ ನಡೆಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next