Advertisement

ದೀಪಕ್‌ ರಾವ್‌ ಹತ್ಯೆ ಹಿನ್ನೆಲೆ

09:25 AM Jan 05, 2018 | Team Udayavani |

ಸುರತ್ಕಲ್‌ : ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಹಿನ್ನೆಲೆಯಲ್ಲಿ ಗುರುವಾರವೂ ಮಂಗಳೂರು ಮಹಾ ನಗರ ಪಾಲಿಕೆಯ ಸುರತ್ಕಲ್‌ ಉಪವಿಭಾಗ ಸಂಪೂರ್ಣ ಸ್ತಬ್ದವಾಗಿತ್ತು. ಸುರತ್ಕಲ್‌ ಮಾರುಕಟ್ಟೆ, ಅಂಗಡಿ,
ಹೋಟೆ ಲುಗಳು ಬಂದ್‌ ಆಗಿದ್ದರಿಂದ ಜನ ಸಂಚಾರ ವಿರಳವಾಗಿತ್ತು.

Advertisement

ಕಾಟಿಪಳ್ಳ ಮೂಡಾಯಿ ಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸಿಮ್‌ ವಿತರಕ, ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಅವರ ಪಾರ್ಥಿವ ಶರೀರ ಮೆರೆವಣಿಗೆಯಲ್ಲಿ ಕೊಂಡೊಯ್ಯುವ ವೇಳೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿ ಗೌರವ ಸೂಚಿಸಬೇಕು ಎಂದು ಹಿಂದೂ ಸಂಘಟನೆಗಳು ಕರೆ ನೀಡಿದ ಮೇರೆಗೆ ಸುರತ್ಕಲ್‌, ಕೃಷ್ಣಾಪುರ ಸಹಿತ ಪಾಲಿಕೆ ಉಪನಗರ ವ್ಯಾಪ್ತಿಯಲ್ಲಿ ಬಂದ್‌ ಆಚರಿಸ ಲಾಯಿತಲ್ಲದೆ ಜನಸಂಚಾರ ವಿರಳವಾಗಿತ್ತು.

ಬುಧವಾರ ರಾತ್ರಿಯೇ ಗುರುವಾರ ಬಂದ್‌ ಆಗುವ ಮುನ್ಸೂಚನೆ ಲಭಿಸಿದ್ದರಿಂದ ಜನತೆ ಮನೆಯಿಂದ ಹೊರ
ಬಂದಿರಲಿಲ್ಲ. ಮಂಗಳೂರು ಉಡುಪಿ ಹೆದ್ದಾರಿಯಲ್ಲಿ ಖಾಸಗಿ ವಾಹನಗಳು, ಸರಕಾರಿ, ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳ
ಓಡಾಟ ಎಂದಿನಂತಿತ್ತು. ಸುರತ್ಕಲ್‌ ಪೇಟೆಯ ಮಾರುಕಟ್ಟೆ, ಒಳ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳು, ಕೃಷ್ಣಾಪುರ, ಚೊಕ್ಕಬೆಟ್ಟು , ಗಣೇಶ್‌ಪುರ ಸಹಿತ ವಿವಿಧೆಡೆ ಬಂದ್‌ ಆಚರಿಸಲಾಯಿತು.

ಮೇಲ್ಸೇತುವೆ ಮೇಲೆ ಸಂಚಾರ
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್‌ ಸಂಚಾರವನ್ನು ಸುರತ್ಕಲ್‌ನಲ್ಲಿ ಮೇಲ್ಸೇತುವೆ ಮೇಲೆ ಹೋಗುವಂತೆ ಸೂಚಿಸಲಾಗಿತ್ತು. ಸುರತ್ಕಲ್‌ ಪರಿಸರದ ಶಾಲಾ-ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ
ರಜೆ ನೀಡಲಾಗಿತ್ತು. ಅಂತ್ಯಕ್ರಿಯೆ ನಡೆದ ಅನಂತರ ಸಂಜೆಯ ವೇಳೆ ಕೆಲವೊಂದು ಅಂಗಡಿಗಳು ತೆರೆದುಕೊಂಡವು.

ಯಾತ್ರಿಗಳ ಪರದಾಟ
ಆಟೋ ರಿಕ್ಷಾಗಳು, ಬಾಡಿಗೆ ಕಾರುಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದರಿಂದ ರೈಲು ಮೂಲಕ ಬಂದ ಪ್ರಯಾಣಿರು
ಸುಮಾರು 2 ಕಿ.ಮೀ. ನಡೆದುಕೊಂಡೇ ಎಕ್ಸ್‌ಪ್ರೆಸ್‌ ಬಸ್‌ ತಂಗುದಾಣ ತಲುಪಬೇಕಾಯಿತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡ ಪರಿಣಾಮ ಮಹಿಳೆಯರು, ಮಕ್ಕಳು ಹೆಚ್ಚಿನ ಸಮಸ್ಯೆ ಎದುರಿಸ ಬೇಕಾಯಿತು. ಉಳಿದಂತೆ ಸುರತ್ಕಲ್‌ನಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವ ಬಸ್‌ಗಳು ಸಂರಿಸದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next