Advertisement

ಸುರತ್ಕಲ್‌ ಮೆಸ್ಕಾಂ ಜನ ಸಂಪರ್ಕ ಸಭೆ 

02:08 PM Feb 08, 2018 | Team Udayavani |

ಸುರತ್ಕಲ್‌ : ಮುಕ್ಕ ಸಸಿಹಿತ್ಲು, ಚೇಳಾಯಿರು ಪ್ರದೇಶಕ್ಕೆ ನೂತನ ಮುಕ್ಕ ಮೆಸ್ಕಾಂ ಶಾಖಾ ಕಚೇರಿ ಕಾರ್ಯಾರಂಭಿಸಲಿದೆ ಎಂದು ಮಂಗಳೂರು ವೃತ್ತ ಅಧಿಧೀಕ್ಷಕ ಮಂಜಪ್ಪ ಹೇಳಿದರು.

Advertisement

ಸುರತ್ಕಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಗತ್ಯಕ್ಕೆ ಅನುಗುಣವಾಗಿ ಮೆಸ್ಕಾಂ ಲೈನ್‌ ಮ್ಯಾನ್‌ಗಳ ನೇಮಕಾತಿ ಮಾಡುತ್ತಿದೆ. ಇದರಿಂದ ಉತ್ತಮ ಸೇವೆ ನೀಡಲು ಸಾಧ್ಯವಿದೆ. ಜನ ಸ್ನೇಹಿಯಾಗಿ ಮೆಸ್ಕಾಂ ಕಾರ್ಯನಿರ್ವಹಿಸಿದಾಗ ಉತ್ತಮ ಸ್ಪಂದನೆ ಸಾಧ್ಯ ಎಂದರು.

110 ಕೆ.ವಿ. ಸಬ್‌ ಸ್ಟೇಷನ್‌ಗೆ ಚಿಂತನೆ
ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್‌ನಲ್ಲಿ 110 ಕೆ.ವಿ. ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಇದಕ್ಕಾಗಿ ಅಗತ್ಯವಾದ ಭೂಮಿ ಎನ್‌ಐಟಿಕೆ ಶಿಕ್ಷಣ ಸಂಸ್ಥೆ ನೀಡಲು ಒಪ್ಪಿಕೊಂಡಿದೆ ಎಂದರು. ಸುರತ್ಕಲ್‌ ಸರ್ವಿಸ್‌ ರಸ್ತೆಯಲ್ಲಿ ಅಡಚಣೆಯಾಗುತ್ತಿರುವ ವಿದ್ಯುತ್‌ ಕಂಬವನ್ನು ಸ್ಥಳಾಂತರಗೊಳಿಸಬೇಕು ಎಂಬ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ ಶೀಘ್ರ ಸ್ಥಳಾಂತರಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

ಮೆಸ್ಕಾಂ ಬಿಲ್‌ ಅಕ್ಷರಗಳು ಕೆಲವೇ ದಿನಗಳಲ್ಲಿ ಒರೆಸಿಹೋಗುತ್ತಿದ್ದು ಗುಣಮಟ್ಟದ ಪೇಪರ್‌ ಬಳಕೆ, ಹೊಸ ಕಟ್ಟಡ ಮನೆಗಳಿಗೆ ತ್ವರಿತ ಸಂಪರ್ಕ ಬಗ್ಗೆ ಚರ್ಚೆ ನಡೆಯಿತು. ಇದೇ ಸಂದರ್ಭ ಸುರತ್ಕಲ್‌ ಪರಿಸರದಲ್ಲಿ ವಿದ್ಯುತ್‌ ಪೂರೈಕೆ ತೃಪ್ತಿಕರವಾಗಿದೆ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು.

ವಿದ್ಯುತ್‌ ಗುತ್ತಿಗೆದಾರರ ಸಂಘದ ಉರ್ಬನ್‌ ಪಿಂಟೋ, ಹರೀಶ್‌ ಕೆ. ಶೆಟ್ಟಿ , ಮತ್ತಿತರರು ಸಲಹೆ ಸೂಚನೆ ನೀಡಿದರು.
ಮೆಸ್ಕಾಂ ಎಂಜಿನಿಯರ್‌ಗಳಾದ ಅಭಿಷೇಕ್‌ ಜೈನ್‌, ಶಿವಪ್ರಸಾದ್‌ ಸುರತ್ಕಲ್‌, ಸುಪ್ರೀತ್‌ ಸಾಲ್ಯಾನ್‌, ರಾಮಕೃಷ್ಣ ಐತಾಳ್‌, ಮತ್ತಿತರರು ಉಪಸ್ಥಿತರಿದ್ದರು.

Advertisement

ಟೆಂಡರ್‌ ಪ್ರಸ್ತಾವ
ಎಲ್‌ಇಟಿ ಲೈನ್‌, ಮೂಲ ಸೌಕರ್ಯ ಅಭಿವೃದ್ಧಿ ಮತ್ತಿತರ ಕಾರ್ಯಗಳ ಅನುಷ್ಠಾನಕ್ಕೆ ಟೆಂಡರ್‌ ಪ್ರಸ್ತಾವ ಮಾಡಲಾಗಿದೆ. ಗ್ರಾಮಗಳ ಬೇಡಿಕೆಗೆ ತಕ್ಕಂತೆ ಅಧಿ ಕಾರಿಗಳು ಅಂದಾಜು ಪಟ್ಟಿ ತಯಾರಿಸಬೇಕು. ಗ್ರಾಹಕರ ಸಮಸ್ಯೆಗೆ ಸ್ಪಂದಿಸಿದಾಗ ಮೆಸ್ಕಾಂ ಜನರ ವಿಶ್ವಾಸ ಗಳಿಸಲು ಹಾಗೂ ಮತ್ತಷ್ಟು ಸೇವೆಯನ್ನು ತ್ವರಿತವಾಗಿ ನೀಡಲು ಸಾಧ್ಯವಾಗುತ್ತದೆ.
– ಮಂಜಪ್ಪ, ಅಧಿಧೀಕ್ಷಕರು ಮೆಸ್ಕಾಂ,
  ಮಂಗಳೂರು ವೃತ್ತ 

Advertisement

Udayavani is now on Telegram. Click here to join our channel and stay updated with the latest news.

Next