Advertisement
ಸುರತ್ಕಲ್ ಸಹಿತ ಸುತ್ತಮುತ್ತ ಮನೆ ಮನೆ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ವಾಹನಗಳನ್ನು ಟ್ರಿಪ್‌ಗಳನ್ನು ಮುಗಿಸಿದ ಬಳಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ನಿಲ್ಲಿಸಲಾಗುತ್ತಿದೆ.
Related Articles
Advertisement
ಪಾಲಿಕೆ ಆಡಳಿತ ಮೌನ
ಗುತ್ತಿಗೆ ಪಡೆದ ಸಂಸ್ಥೆ ತನ್ನ ನೂರಾರು ವಾಹನದ ನಿಲುಗಡೆಗೆ ಬೇಕಾದ ಸ್ಥಳವನ್ನು ಹೊಂದಿರಬೇಕೆಂಬ ನಿಯಮವಿದ್ದರೂ ಖಾಲಿ ಸ್ಥಳಾವಕಾಶ ಇರುವಲ್ಲಿ ನಿಲ್ಲಿಸುತ್ತಾ ಬರಲಾಗುತ್ತಿದೆ. ಗುತ್ತಿಗೆ ನೀಡುವ ಸಂದರ್ಭ ಈ ಷರತ್ತು ವಿಧಿಸಲಾಗಿದ್ದರೂ ಪಾಲಿಕೆ ಆಡಳಿತ ಸ್ಥಳ ಇರುವ ಕಡೆ ನಿಲ್ಲಿ ಎಂಬಂತೆ ಪರೋಕ್ಷವಾಗಿ ಕ್ರಮ ಜರಗಿಸದೆ ಮೌನ ವಹಿಸಿದೆ.
ಸುರತ್ಕಲ್ ಆರೋಗ್ಯ ಕೇಂದ್ರದ ಮುಂಭಾಗ ವಾಹನ ನಿಲ್ಲಿಸದಂತೆ ಈ ಹಿಂದೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. “ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೊಮ್ಮೆ ಆರೋಗ್ಯ ಕೇಂದ್ರದ ವಠಾರದಲ್ಲಿ ತ್ಯಾಜ್ಯ ಸಂಗ್ರಹ ವಾಹನಗಳ ನಿಲುಗಡೆ ಬಗ್ಗೆ ವರದಿ ಪ್ರಕಟಿಸಿತ್ತು. ಬಳಿಕ ಕೆಲವು ಸಮಯ ಅವುಗಳನ್ನು ಅಲ್ಲಿಂದ ತೆರವು ಮಾಡಲಾಗಿತ್ತು. ಇದೀಗ ಮತ್ತೆ ಅಲ್ಲಿ ನಿಲ್ಲಿಸಲಾಗುತ್ತಿದೆ. ಆದರೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.