Advertisement
ಈಗಾಗಲೇ ಕಟ್ಟಡ ಕಾಮಗಾರಿ ಮುಗಿದಿದ್ದು, ಪೀಠೊ ಪಕರಣ ಜೋಡಿಸುವ ಕಾರ್ಯ ನಡೆಯುತ್ತಿದೆ. ಒಟ್ಟು ಎರಡು ಅಂತಸ್ತುಗಳ ಈ ಕಟ್ಟಡದಲ್ಲಿ ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ಅವಕಾಶ ನೀಡಲಾಗಿದೆ. ಉಳಿದಂತೆ ಮೊದಲ ಅಂತಸ್ತಿನಲ್ಲಿ ವಿವಿಧ ವಿಭಾಗಗಳ ಕಚೇರಿ ಇರಲಿದೆ.
Related Articles
Advertisement
ಮಂಗಳೂರು ಲಾಲ್ ಬಾಗ್‌ನಲ್ಲಿರುವ ಕೇಂದ್ರ ಕಚೇರಿ ಸದಾ ಜನಜಂಗುಳಿಯಿಂದ ಕೂಡಿರುತ್ತದೆ ಮಾತ್ರವಲ್ಲ, ಸಣ್ಣ ಕೆಲಸಕ್ಕೂ ಹೊರವಲಯದ ಜನತೆ ನಗರಕ್ಕೆ ಬರಬೇಕಾಗುತ್ತದೆ. ಒಂದು ಬಾರಿಗೆ ಆಗದಿದ್ದಲ್ಲಿ ಹಲವು ಬಾರಿ ಅಲ್ಲಿಗೆ ಅಲೆದಾಡಬೇಕಾಗುತ್ತದೆ. ಅಭಿವೃದ್ಧಿ ಕಾರ್ಯ ಚುರುಕು ಗೊಳಿಸುವ ನಿಟ್ಟಿನಲ್ಲಿ ಕಡತ ವಿಲೇವಾಗಿ ಶೀಘ್ರವಾಗಲು ವಲಯ ಕಚೇರಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆಯಾ ವ್ಯಾಪ್ತಿಯ ನಿವಾಸಿಗಳಿಗೆ ವಲಯ ಕಚೇರಿಯಲ್ಲಿ ಸೌಲಭ್ಯ ದೊರಕುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ವಲಯ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ.
ನೂತನ ಕಟ್ಟಡ ನಿರ್ಮಾಣದಿಂದ ಜನತೆಗೆ ಸಾಕಷ್ಟು ಸ್ಥಳಾವಕಾಶ ದೊರಕಲಿದ್ದು ಕುಳಿತುಕೊಳ್ಳಲು ಆಸನ, ಟೋಕನ್ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಒಂದೇ ಸೂರಿನಡಿ ಅಧಿಕಾರಿಗಳ ಭೇಟಿ ಮತ್ತಿತರ ವ್ಯವಸ್ಥೆಗಳು ಸಿಗಲಿವೆ. ಶಾಸಕರ ಭೇಟಿಗೂ ಅವಕಾಶ ಇರುವುದರಿಂದ ತ್ವರಿತವಾಗಿ ಪಾಲಿಕೆ ಕೆಲಸ ಕಾರ್ಯವಾಗಲು ಪ್ರಯೋಜನವಾಗಲಿದೆ.
ಯಾವೆಲ್ಲ ಅನುಮತಿ ಸಿಗುತ್ತಿದೆ
ನಗರ ಯೋಜನೆಯಡಿ 500 ಚ.ಮೀ. ವಾಸ, ವಾಣಿಜ್ಯ ಕಟ್ಟಡಕ್ಕೆ ಪರವಾನಿಗೆ, ಪ್ರಮಾಣ ಪತ್ರ, ನವೀಕರಣ ಇತ್ಯಾದಿ, ಇದರ ಜತೆಗೆ ಖಾತಾ ನೋಂದಣಿ, ಕಟ್ಟಡ ನಂಬ್ರ ವಿತರಣೆ ಸಹಿತ ಆರೋಗ್ಯ ಶಾಖೆಯಡಿ ಪರವಾನಿಗೆ, ಉದ್ದಿಮೆ ಪರವಾನಿಗೆ ಮತ್ತಿತರ ಜವಾಬ್ದಾರಿ ನೀಡಲಾಗಿದೆ.
ಜನಸ್ನೇಹಿ ಆಡಳಿತ ವ್ಯವಸ್ಥೆಗೆ ಕ್ರಮ: ಜನತಾ ದರ್ಶನಕ್ಕೆ ಸ್ಥಳಾವಕಾಶವನ್ನು ನನ್ನ ಕಚೇರಿಯಲ್ಲಿಯೇ ನೀಡಲಾಗಿದೆ. ಸಂದರ್ಶನಕ್ಕೆ ಸಾರ್ವಜನಿಕರು ಬಂದಲ್ಲಿ ಎಲ್ಲ ಸೌಲಭ್ಯ ಸಿಗುವಂತಾಗಲು ಹೊಸಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆ. 25ರ ಒಳಗಾಗಿ ಇದನ್ನು ಸಾರ್ವಜನಿಕರ ಬಳಕೆಗೆ ಉಪಯೋಗಿಸಲು ತೀರ್ಮಾನಿಸಲಾಗಿದೆ. ಜನಸ್ನೇಹಿ ಆಡಳಿತ ವ್ಯವಸ್ಥೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. –ಡಾ| ಭರತ್ ಶೆಟ್ಟಿ ವೈ., ಶಾಸಕರು
ಪರಿಶೀಲಿಸಿ ಉದ್ಘಾಟನೆಗೆ ದಿನ ನಿಗದಿ: ಉದ್ಘಾಟನೆಗೂ ಮುನ್ನ ಆನ್‌ಲೈನ್ ವ್ಯವಸ್ಥೆ ಹಾಗೂ ಕಟ್ಟಡದಲ್ಲಿ ಸಮರ್ಪಕ ಕಾರ್ಯಚಟುವಟಿಕೆ ಸರಿಯಿದೆಯೇ ಎಂಬುದನ್ನು ಪರಿಶೀಲಿಸಲ್ಲಿದ್ದೇವೆ. ಬಳಿಕ ಉದ್ಘಾಟನೆಗೆ ದಿನ ನಿಗದಿ ಮಾಡಲಾಗುವುದು. – ವಾಣಿ ವಿ. ಆಳ್ವ, ವಲಯ ಆಯುಕ್ತರು ಸುರತ್ಕಲ್