ಸುರತ್ಕಲ್: ಯಾವುದೋ ಕಾರಣಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.
ಸುರತ್ಕಲ್ ಸಮೀಪದ ತಡಂಬೈಲ್ ನಿವಾಸಿ ಧನುಷ್ (21) ಮೃತ ಯುವಕ.
ವಾರದ ಹಿಂದೆ ಈತನ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ಎದುರು ವಾಹನ ಸವಾರನಿಗೆ ಎಂಟು ಸಾವಿರ ರೂ. ರಿಪೇರಿ ಖರ್ಚು ಕೊಡಲು ಸಂಚಾರಿ ಪೊಲೀಸರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಹಣ ಕೊಡಲು ಸಾಧ್ಯವಾಗದ ಕಾರಣ ಶುಕ್ರವಾರ ಸಂಚಾರಿ ಪೊಲೀಸರು ಈತನ ಸ್ಕೂಟರ್ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುರತ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.