Advertisement

Surathkal: ತುಳುನಾಡಿನ ಆಹಾರ, ಐತಿಹಾಸಿಕ ಪರಂಪರೆ ಮಾಹಿತಿಗೆ ‘ಸೊಲ್ಮೆಲು’

08:18 AM Oct 25, 2024 | Team Udayavani |

ಸುರತ್ಕಲ್‌: ದಕ್ಷಿಣ ಕನ್ನಡ, ಉಡುಪಿ ಪ್ರದೇಶಗಳು ಪ್ರತೀ ವರ್ಷ ಲಕ್ಷಾಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ತುಳುನಾಡಿನ ಆಹಾರ ಪದ್ಧತಿ ಹಾಗೂ ಪರಂಪರೆಯನ್ನು ಪ್ರಸ್ತುತಪಡಿಸಿ ಅದರತ್ತ ಗಮನ ಸೆಳೆಯಲು ಎನ್‌ಐಟಿಕೆ ವಿದ್ಯಾರ್ಥಿಗಳು ‘ಸೊಲ್ಮೆಲು’ ಎಂಬ ಸಾಫ್ಟ್ ವೇರ್‌ ಅಭಿವೃದ್ಧಿಪಡಿಸಿದ್ದಾರೆ.

Advertisement

ಇವರಿಗೆ ರೋಬೋಸಾಫ್ಟ್‌ ಟೆಕ್ನಾಲಜೀಸ್‌ನ ವಿನ್ಯಾಸ ಮತ್ತು ತಾಂತ್ರಿಕ ತಜ್ಞರ ತಂಡವು ಅವರಿಗೆ ಮಾರ್ಗದರ್ಶನ ನೀಡಿದೆ. ದ.ಕ.ಮತ್ತು ಉಡುಪಿ ಪ್ರದೇಶಗಳು ಯಕ್ಷಗಾನ, ಹುಲಿವೇಷ, ನಾಗಮಂಡಲ, ಕಂಬಳ ಮತ್ತು ಭೂತಾರಾಧನೆಯಿಂದ ಹಿಡಿದು ತಮ್ಮ ವಿಶಿಷ್ಟ ಕಲೆ ಮತ್ತು ಕರಕುಶಲ ಕಲೆಗಳ ಪರಿಚಯ ಇದರಲ್ಲಿದೆ.

ವಿಶೇಷ ತಿಂಡಿ ತಿನಿಸುಗಳಾದ ಗೋಳಿ ಬಜೆ, ಪತ್ರೊಡೆ, ನೀರ್‌ ದೋಸೆ, ಮಂಗಳೂರು ಬನ್ಸ್‌, ಮಂಗಳೂರು ಮೀನು ಕರಿ, ಕಡುಬು, ಮೀನು ಊಟ, ಗಂಜಿ ಊಟ ಮತ್ತು ಇತರ ವಿಶಿಷ್ಟವಾದ ಸ್ಥಳೀಯ ಪಾಕಪದ್ಧತಿಗಳ ಪರಿಚಯವನ್ನು ಸೊಲ್ಮೆಲು ಮಾಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next