Advertisement

Surathkal: ಸ್ಕೂಟರ್‌ಗೆ ಲಾರಿ ಢಿಕ್ಕಿ; ಬಾಲಕಿ ಸಾವು

09:38 PM Feb 07, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪದ ಮುಕ್ಕ ಬಳಿಯ ಸರ್ವಿಸ್‌ ರೋಡಿನಲ್ಲಿ ಹೋಗುತ್ತಿದ್ದ ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Advertisement

ಮುಕ್ಕ ಮಿತ್ರಪಟ್ಣದ ಮಾನ್ವಿ (12) ಮೃತ ಬಾಲಕಿ. ಮಿತ್ರಪಟ್ಣದ ಯಶವಂತ್‌ ಅವರು ಶಾಲೆಯಿಂದ ತನ್ನ ಪುತ್ರಿಯನ್ನು ಕರೆದುಕೊಂಡು ಮನೆಯ ಕಡೆ ಹೋಗುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಮಾನ್ವಿ ಕೆಳಗೆ ಬಿದ್ದಿದ್ದು ಲಾರಿ ಅವಳ ಮೇಲೇಯೇ ಹರಿದಿದೆ. ಲಾರಿ ಚಾಲಕನ ನಿರ್ಲಕ್ಷéತನಕ್ಕೆ ಆಕ್ರೋಶಗೊಂಡ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಬಂದ ಟ್ರಾಫಿಕ್‌ ಪೊಲೀಸರು ಪರಿಸ್ಥಿಯನ್ನು ತಹಬದಿಗೆ ತಂದರು. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next