Advertisement

ಹೋಳಿ ಆಚರಣೆ: ಬಣ್ಣಗಳಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮೂಹ

05:33 AM Mar 22, 2019 | |

ಸುರತ್ಕಲ್‌ : ಇಲ್ಲಿನ ಎನ್‌ ಐಟಿಕೆ ಕ್ಯಾಂಪಸ್‌ ನಲ್ಲಿ ಗುರುವಾರ ವಿದ್ಯಾ ರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿಗಳು ಡಿಜೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ, ಪರಸ್ಪರ ಬಣ್ಣ ಹಂಚಿಕೊಂಡು ಶುಭಾಶಯ ಕೋರಿದರು. ಜಾತಿ-ಭೇದ ಮರೆತು ಸಂತಸ ಎಲ್ಲೆಡೆ ಹೊಮ್ಮಿಸುವ ಈ ಹಬ್ಬವನ್ನು ಇಲ್ಲಿನ ದೇಶ –
ವಿದೇಶದ ನೂರಾರು ಸಂಖ್ಯೆಯ ಯುವಕ ಯುವತಿಯರು ಒಟ್ಟಿಗೆ ಆಚರಿಸಿದರು.

Advertisement

ಕೆಡುಕಿನ ವಿರುದ್ಧ ಒಳಿತಿಗೆ ಜಯವಾದ ದಿನವನ್ನು ಹೋಳಿ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ರಂಗಿನ ಹಬ್ಬವನ್ನು ಪ್ರೀತಿ ಪ್ರೇಮದ ದ್ಯೋತಕ ಎಂದು ಭಾವಿಸಲಾಗುತ್ತದೆ. ಶತಮಾನಗಳ ಹಿಂದಿನಿಂದಲೂ ಆಚರಣೆಯನ್ನು ಹೋಳಿ ಬರ ಬರುತ್ತಾ ಆಚರಣೆಯಲ್ಲಿ ಬದಲಾವಣೆ ಕಂಡಿತು. ಹಿಂದೂಗಳ ಆಚರಣೆಯಾಗಿ ಆರಂಭವಾದ ಹೋಳಿ ಇಂದು ಎಲ್ಲ ಜಾತಿಯವರು ಜಾಗತಿಕವಾಗಿ ಆಚರಿಸುತ್ತಾರೆ.

ಆಂಧ್ರಪ್ರದೇಶದ ವಿದ್ಯಾರ್ಥಿ ರಮೇಶ್‌ ಮಾತನಾಡಿ, ಈ ಬಾರಿ ನನ್ನ ವ್ಯಾಸಂಗ ಕೊನೆಗೊಳ್ಳುತ್ತಿದೆ. ಮೂರ್‍ನಾಲ್ಕು ವರ್ಷಗಳಿಂದ ಹೋಲಿ ಆಚರಣೆಯಲ್ಲಿ ಭಾಗವಹಿಸುತ್ತಾ ಸಂತಸ ಪಟ್ಟಿದ್ದೇನೆ ಎಂದರು. ರಶ್ಮಿ ಮಾತನಾಡಿ, ಹೋಳಿ ಆಚರಣೆ ಒಳಿತು ಕೆಡುಕುಗಳ ಸಂದೇಶ ನೀಡುತ್ತದೆ. ಒಟ್ಟಾಗಿ ಆಚರಿಸುವಾಗ ಸಂತಸ ಸಿಗುತ್ತದೆ ಎಂದರು.

ಮುಂಜಾಗ್ರತೆ ಅಗತ್ಯ 
ತಂತ್ರಜ್ಞಾನ ಮುಂದುವರಿದಿರದ ಆ ಕಾಲದಲ್ಲಿ ಹೋಳಿ ಬಣ್ಣ ತಯಾರಾಗುತ್ತಿದ್ದದ್ದು, ನೈಸರ್ಗಿಕ ಸಸ್ಯಗಳಿಂದ ಬಣ್ಣವನ್ನು ತಯಾರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಳಸುವ ವಿಷಯುಕ್ತ ಮಿಶ್ರಿತ ಬಣ್ಣಗಳು ನಿಸರ್ಗಕ್ಕೆ ಕೊಡಲಿ ಏಟು ನೀಡುವುದರ ಜತೆಯಲ್ಲಿ ಆರೋಗ್ಯವನ್ನು ಕೆಡಿಸುತ್ತಿದೆ. ಹಾಗಾಗಿ ಹೋಲಿ ಹಬ್ಬವನ್ನು ಮುಂಜಾಗ್ರತೆಯಿಂದ ಆಚರಿಸಬೇಕು ಎನ್ನುವುದೇ ಎಲ್ಲರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next