Advertisement

ಗುಜರಾತ್; 3 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಅಪರಾಧಿಗೆ ಗಲ್ಲುಶಿಕ್ಷೆ

09:54 AM Dec 28, 2019 | Nagendra Trasi |

ಅಹಮದಾಬಾದ್: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಅಪರಾಧಿಗೆ ಗುಜರಾತ್ ಹೈಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Advertisement

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸೂರತ್ ನಲ್ಲಿ ಅನಿಲ್ ಯಾದವ್ ಎಂಬ ಆರೋಪಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ. ಘಟನೆ ನಡೆದ ದಿನದಂದು ಮಗು ಮನೆಯಿಂದ ನಾಪತ್ತೆಯಾಗಿದ್ದು ಪೋಷಕರ ಗಮನಕ್ಕೆ ಬಂದಿತ್ತು. ನಂತರ ಕಟ್ಟಡವೊಂದರಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಘಟನೆ ನಂತರ ಬಿಹಾರ, ಉತ್ತರಪ್ರದೇಶದಿಂದ ಗುಜರಾತ್ ಗೆ ವಲಸೆ ಬಂದಿದ್ದವರ ಮೇಲೆ ದಾಳಿ ನಡೆದಿತ್ತು. ಆರೋಪಿ ಯಾದವ್ ಬಿಹಾರಕ್ಕೆ ಪರಾರಿಯಾಗಿದ್ದ. ಆದರೆ ಪೊಲೀಸ್ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ವಿಶೇಷ ಕೋರ್ಟ್ ಯಾದವ್ ಗೆ ಕಳೆದ ವರ್ಷ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಘಟನೆ ಬಗ್ಗೆ 38 ಸಾಕ್ಷಿಗಳ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಾಕ್ಷಿಯಾಗಿ ಕೋರ್ಟ್ ಗೆ ಪೊಲೀಸ್ ತನಿಖಾಧಿಕಾರಿಗಳು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next