Advertisement

ಕೃಷಿ ಇಲಾಖೆಯಿಂದ ನರೇಗಾ ಕಾಮಗಾರಿ

06:54 PM Jun 08, 2020 | Naveen |

ಸುರಪುರ: ಕೃಷಿ ಇಲಾಖೆ ನೇರಾಗಾ ಯೊಜನೆ ಅಡಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ತಾಲೂಕಿನ ನಾರಾಯಣಪುರ, ಕೊಡೇಕಲ್‌, ರಾಜನಕೋಳೂರ, ಹುಣಸಗಿ, ಕಕ್ಕೇರಾ, ಕೆಂಭಾವಿ, ಮಲ್ಲಾ ಹೆಗಣದೊಡ್ಡಿ ಸೇರಿದಂತೆ ಇತರೆ ಗ್ರಾಪಂ ವ್ಯಾಪ್ತಿಯಲ್ಲಿ (ಟ್ರಂಚ್‌ ಬಂಡ್‌) ಕ್ಷೇತ್ರ ಬದು ಮತ್ತು ಕೃಷಿ ಹೊಂಡ ಕಾಮಗಾರಿಗಳು ಭರದಿಂದ ಸಾಗಿವೆ.

Advertisement

ನಾರಯಣಪುರದ ದೇವರಗಡ್ಡಿ, ಜಂಗನಗಡ್ಡಿ, ಬಲಶೆಟ್ಟಹಾಳ, ಬನ್ನೆಟ್ಟಿ, ಕಚಕನೂರ, ಹಣಮಸಾಗರ, ಬರದೇವನಾಳ, ಜಾಲಿಬೆಂಚಿ, ದೇವಿಕೇರಾ, ಪೇಠ ಅಮ್ಮಾಪುರ, ಗೌಡಗೇರಾ, ಏವುರ, ಮಾಲಗತ್ತಿ ಜೈನಾಪುರದಲ್ಲಿ ಕಾಮಗಾರಿಗಳು ಪಗ್ರತಿ ಹಂತದಲ್ಲಿವೆ ಕಾಮಗಾರಿ ಉಸ್ತುವಾರಿ ವಹಿಸಿರುವ ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ ಮಾತನಾಡಿ, ಕೋವಿಡ್‌-19 ಹಿನ್ನೆಲೆಯಲಿ ಕಾರ್ಮಿಕರಿಗೆ ಕೆಲಸ ಒದಗಿಸುವ ಉದ್ದೇಶವಿಟ್ಟುಕೊಂಡು ಕೆಲಸ ಆರಂಭಿಸಲಾಗಿದೆ.

ಕ್ಷೇತ್ರ ಬದು ಮತ್ತು ಕೃಷಿ ಹೊಂಡ ಕಾಮಗಾರಿ ಮಾತ್ರ ಮಾಡಿಸಲಾಗುತ್ತಿದೆ. ಯಾವುದೇ ಯಂತ್ರದ ಸಹಾಯವಿಲ್ಲದೆ ಸಂಪೂರ್ಣ ಕಾರ್ಮಿ ಕರಿಂದಲೇ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಪ್ರತಿ ಕಾರ್ಮಿಕರಿಗೆ ದಿನಕ್ಕೆ 275 ರೂ. ಕೂಲಿ ನೀಡಲಾಗುತ್ತಿದೆ. ವಾರದ ನಂತರ ಕೂಲಿ ಹಣವನ್ನು ಎಂಎಸ್‌ಐ ಮೂಲಕ ಕಾರ್ಮಿಕರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next