ಸುರಪುರ: ಸ್ವಾಗತಿಸುವ ತಿಪ್ಪೆ ಗುಂಡಿಗಳು, ತಪ್ಪದ ಬಹಿರ್ದೆಸೆ, ರಸ್ತೆ ಬದಿಯಲ್ಲಿಯೇ ಬಯಲು ಶೌಚ, ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ಅಲ್ಲಲ್ಲಿ ನಿಂತಿರುವ ತ್ಯಾಜ್ಯ ನೀರು, ಸ್ವಚ್ಛತೆ ಮಾತ್ರ ಮರೀಚಿಕೆ ಇದು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮದಲ್ಲಿ ಕಂಡು ಬರುವ ನೈಜ ಚಿತ್ರಣ.
Advertisement
ರಾಜ್ಯ ಸರ್ಕಾರ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಹೆಗ್ಗಣದೊಡ್ಡಿ ಗ್ರಾಮವನ್ನು 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡಿತ್ತು. ಗಾಂಧಿಧೀಜಿಯವರ ರಾಮರಾಜ್ಯ ಕನಸು ನನಸಿಗಾಗಿ ರಾಜ್ಯದಲ್ಲಿ 175 ಗ್ರಾಪಂಗಳನ್ನು ಈ ಪ್ರಶಸಿಗೆ ಆಯ್ಕೆಯಾಗಿವೆ.
Related Articles
Advertisement
ಕಾಟಾಚಾರದ ಶೆಡ್: ಗ್ರಾಮದ ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಗ್ರಾಪಂನವರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಹಿìದೆಸೆ ಮಾತ್ರ ತಪ್ಪಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಜಾಗೃತಿ ಕೊರತೆ: ಗ್ರಾಪಂ ವ್ಯಾಪ್ತಿಯಲ್ಲಿ ಹೆಗ್ಗಣದೊಡ್ಡಿ, ಗೊಡ್ರಿಹಾಳ, ಜೈನಾಪುರ, ಜೈನಾಪುರ ತಾಂಡಾ ಸೇರಿ ಒಟ್ಟು 7035 ಜನ ಸಂಖ್ಯೆಯಿದೆ. ಮೂರು ಗ್ರಾಮಗಳ ನಡುವೆ ಕೇವಲ 435 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಇವುಗಳ ಬಳಕೆ ಮಾತ್ರ ಆಗುತ್ತಿಲ್ಲ.
ಬೇಕಾಬಿಟ್ಟಿಯಾಗಿ ಸಿಸಿ ರಸ್ತೆ ನಿರ್ಮಾಣ: ಗ್ರಾಮದಲ್ಲಿ ಸಿಸಿ ರಸೆ ನಿರ್ಮಾಣ ಮಾಡಲಾಗಿದ್ದು, ಎಲ್ಲಿಯೂ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಸರಾಗವಾಗಿ ಹರಿಯುತ್ತಿದೆ. ಸಿಸಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಘನ ತ್ಯಾಜ್ಯ ವಿಲೇವಾರಿಯಾಗದ ಕಾರಣ ಹಂದಿ, ನಾಯಿಗಳ ತಾಣವಾಗಿದೆ. ತ್ಯಾಜ್ಯ ವಸ್ತು ಕೊಳೆತು ಗಬ್ಬೆದ್ದು ನಾರುತ್ತಿದೆ. ಐತಿಹಾಸಿಕ ಧಾರ್ಮಿಕ ಕ್ಷೇತ್ರ ಎಂದೆ ಕರೆಯುವ ರಾಜಾ ಭಕ್ಷುರ ದೇವಸ್ಥನಕ್ಕೆ ಹೋಗುವ ರಸ್ತೆ ಗಲೀಜಿನಿಂದ ಕೂಡಿದೆ. ಕೇವಲ ದಾಖಲೆಗಳನ್ನು ನೋಡಿ ಪ್ರಶಸ್ತಿ ನೀಡುವ ಪ್ರವೃತ್ತಿಯನ್ನು ಸರ್ಕಾರ ಕೈ ಬಿಡಬೇಕು. ವಾಸ್ತವಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಯೋಜನೆ ಅನುಷ್ಠಾನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಪಾರದರ್ಶಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಪಂ ಮಾಜಿ ಸದಸ್ಯ ಮಾನಪ್ಪ ಸೂಗೂರು ಆಗ್ರಹಿಸಿದ್ದಾರೆ.