Advertisement

ಸುಗ್ರೀವಾಜ್ಞೆ-ತಿದ್ದುಪಡಿ ಕಾಯ್ದೆ ವಾಪಸಿಗೆ ಆಗ್ರಹ

06:49 PM Jun 13, 2020 | Naveen |

ಸುರಪುರ: ಕರ್ನಾಟಕ ಪ್ರಾಂತ ರೈತ ಸಂಘ ನೀಡಿದ್ದ ರಾಷ್ಟ್ರ ವ್ಯಾಪಿ ಕರೆ ಬಿಂಬಲಿಸಿ ತಾಲೂಕು ಘಟಕದ ಕಾರ್ಯಕರ್ತರು ಇತ್ತೀಚೆಗೆ ಇಲ್ಲಿನ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಎಪಿಎಂಸಿ, ವಿದ್ಯುತ್‌, ಅಗತ್ಯ ವಸ್ತುಗಳ ಕಾಯ್ದೆಯ ಸುಗ್ರೀವಾಜ್ಞೆ ಪ್ರತಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ ತಿದ್ದುಪಡಿ ಕಾಯ್ದೆಗಳ ವಾಪಸಿಗೆ ಆಗ್ರಹಿಸಿದರು.

Advertisement

ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನಾಕರ್‌ ಮಾತನಾಡಿ, ಕಾರ್ಪೋರೇಟ್‌ ಕಂಪನಿಗಳ ಪರವಾದ ರೈತ ವಿರೋಧಿಯಾದ  ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗಳ ಮೂಲಕ ರಾಜ್ಯ ಸರಕಾರ ರೈತರ ಶೋಷಣೆಗೆ ಮುಂದಾಗಿದೆ. ಇದರಿಂದ ರೈತರಿಗೆ ಮಾತ್ರವಲ್ಲ ಕುರಿ, ಕೋಳಿ ಸಾಕಾಣಿಕೆ, ಪಶು ಸಂಗೋಪನೆ, ಕೂಲಿ ಕಾರ್ಮಿಕರು, ಹಮಾಲರು ಸೇರಿದಂತೆ ಇತರೆ ಸಣ್ಣಪುಟ್ಟ ಬೀದಿ ಬದಿ ವ್ಯಾಪಾರಿಗಳಿಗೂ ಇದರ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್‌ ನದಾಫ್‌ ಮಾತನಾಡಿ, ತಿದ್ದುಪಡಿ ಹಾಗೂ ಸುಗ್ರೀವಾಜ್ಞೆ ಕಾಯ್ದೆ ಅಂಗೀಕಾರ ಮಾಡಬೇಕೆಂದು ಒತ್ತಾಯಿಸುವ ಕ್ರಮಗಳನ್ನು ಸರಕಾರ ಕೂಡಲೆ ಕೈಬಿಡಬೇಕು. ರೈತರು, ಕೃಷಿ ಕೂಲಿಕಾರರು, ಕಸುಬುದಾರರು ಮತ್ತು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ವರದಿಯನ್ನು ಅನುಷ್ಠಾನಗೊಳಿಸಬೇಕು. ಕೃಷಿ ಸಾಲಗಳ ವಸೂಲಾತಿ ನಿಲ್ಲಿಸಬೇಕು. ಮುಂಗಾರಿಗೆ ಹೊಸ ಸಾಲ ಕೊಡಬೇಕು. ಲಾಕ್‌ಡೌನ್‌ ವೇಳೆಯಲ್ಲಿ ಆದ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು. ಬಿಪಿಎಲ್‌ ಕಾರ್ಡ್‌ಗೆ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿಯೊಂದಿಗೆ ಸಕ್ಕರೆ, ಎಣ್ಣೆ, ಉಪ್ಪು ಬೇಳೆ ಸೇರಿದಂತೆ 16 ಅಗತ್ಯ ಸಾಮಗ್ರಿ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿದರು. ಬಳಿಕ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಕೂಲಿಕಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ದೊಡ್ಡಮನಿ, ಕೆಪಿಆರ್‌ಎಸ್‌ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next