Advertisement

33 ಮಂದಿ ನೆಗೆಟಿವ್‌: ಗುಣಮುಖರಾದವರ ಬಿಡುಗಡೆ

12:20 PM Jun 15, 2020 | Naveen |

ಸುರಪುರ: ಹಸನಾಪುರ ನಿಷ್ಠಿ ಇಂಜಿನಿಯರಿಂಗ್‌ ಕಾಲೇಜು ವಸತಿ ನಿಲಯದ ಕೋವಿಡ್‌ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 33 ಜನರು ಸಂಪೂರ್ಣ ಗುಣಮುಖರಾಗಿದ್ದು, ರವಿವಾರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ ತಿಳಿಸಿದ್ದಾರೆ.

Advertisement

ಚಿಕಿತ್ಸೆ ಪಡೆಯುತ್ತಿದ್ದ 33 ಜನರ ವರದಿಗಳು ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಿಕೊಡಲಾಯಿತು. ಇದೇ ಆಸ್ಪತ್ರೆಯಿಂದ ಗುರುವಾರ 28 ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಡಾ| ಓಂಪ್ರಕಾಶ ಅಂಬುರೆ, ಡಾ| ಇಮಿ¤ಯಾಜ್‌ ಹುಸೇನ್‌ ಸೇರಿ ವೈದ್ಯರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next