ಸುರಪುರ: ರಂಗಂಪೇಟೆ ರಸ್ತೆ ಅಗಲೀಕರಣ ಕುರಿತು ಸರ್ಕಾರ ಮೇಲಿಂದ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ಸಾರ್ವಜನಿಕರು ಅಗಲೀಕರಣ ಕುರಿತು ಸಲಹೆ ಸೂಚನೆ ನೀಡಬೇಕು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಈ ಕುರಿತು ಪಕ್ಷದ ಕಚೇರಿ ತಮ್ಮ ನಿವಾಸದಲ್ಲಿ ರವಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಮತ್ತು ವಾಹನಗಳ ಸಂಚಾರಕ್ಕೆ ಅನುಗುಣವಾಗಿ ಚರಂಡಿ ಸೇರಿದಂತೆ 48 ಅಡಿ ನಿ ರ್ದಿಷ್ಟ ಪಡಿಸಿ ಅಗಲೀಕರಣಕ್ಕೆ ಸರಕಾರ ಆದೇಶಿಸಿದೆ. ಇದರಿಂದ ರಸ್ತೆ ಅಕ್ಕಪಕ್ಕದ ಬಹುತೇಕ ಮನೆ ಅಂಗಡಿಗಳು ಅಗಲೀಕರಣದಿಂದ ಹಾನಿಗೊಳಗಾಗಲಿವೆ.
ಈ ಕುರಿತು ಸಲಹೆ ನೀಡುವಂತೆ ಹೇಳಿದರು. ವೀರಸಂಗಪ್ಪ ಕೊಡೇಕಲ್, ಮಲ್ಲಿಕಾರ್ಜುನ ಕಡೇಚೂರ, ರಾಜು ಪುಲ್ಸೆ ಮಾತನಾಡಿ, ಪಟ್ಟಣದಲ್ಲಿ ಅಷ್ಟೊಂದು ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ಇಲಲ. ಸಣ್ಣ ಪ್ರಮಾಣದಲ್ಲಿ ಅಂಗಡಿಗಳಿವೆ.
ಭಾರಿ ಗಾತ್ರದ ವಾಹನಗಳು ಬರುವುದಿಲ್ಲ. 48 ಅಡಿ ಅಗಲೀಕರಣ ಮಾಡಿದಲ್ಲಿ ಕೆಲ ಬಡ ಕಟುಂಬಗಳು ಸಂಪೂರ್ಣ ಮನೆ ಕಳೆದುಕೊಂಡು ಬೀದಿಗೆ ಬೀಳಲಿವೆ. ಆದ್ದರಿಂದ ಅಗಲೀಕರಣ ಪ್ರಮಾಣ ಕಡಿಮೆ ಮಾಡಿಸಬೇಕು. ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕು ಎಂದು ಸಲಹೆ ನೀಡಿದರು.
ನಂತರ ಶಾಸಕರು ಮಾತನಾಡಿ, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಗಲೀಕರಣ ಸಾಧ್ಯವಾದಷ್ಟು ಕಡಿಮೆ ಮಾಡಿಸಲು ಪ್ರತ್ನಿಸುತ್ತೇನೆ ಎಂದು ಭರವಸೆ ನೀಡಿದರು. ರಾಜಾ ಹಣಮಪ್ಪ ನಾಯಕ (ತಾತಾ) ವೇಣುಮಾಧವ ನಾಯಕ, ನರಸಿಂಹಕಾಂತ ಪಂಚಮಗಿರಿ, ಜೈರಾಮ ನಾಯಕ, ಹಣಮಂತ ಚಂದನಕೇರಿ, ವೆಂಕಟೇಶ ಗದ್ವಾಲ, ಗೋಪಾಲ ದಾಸೆ, ವೀರಭದ್ರ ಕುಂಬಾರ, ಅಪ್ಸ್‌ರ್ ಹುಸೇನ ದಿಲ್ಲದಾರ, ಮಲ್ಲೇಶಿ ಪೂಜಾರಿ, ರಂಗಣ್ಣ ದೊರೆ, ಉಮೇಶ ಡೊಳ್ಳೆ, ಮಹಾದೇವಪ್ಪ ಶಾಬಾದಿ, ಇಸ್ಮಾಹಿಲ್ ಬಳಿಚಕ್ರ ಇದ್ದರು.