Advertisement

ಸುರಪುರ ನಗರಸಭೆ ಕಾರ್ಮಿಕರಿಗೆ ಮಾಸ್ಕ್ ವಿತರಣೆ

06:34 PM Mar 14, 2020 | Naveen |

ಸುರಪುರ: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ನಗರಸಭೆ ಪೌರಕಾರ್ಮಿಕರಿಗೆ ಮಾಸ್ಕ್ ವಿತರಿಸಲಾಯಿತು.

Advertisement

ರಂಗಂಪೇಟೆ ನಗರಸಭೆ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌ ಯುವ ಮುಖಂಡ ಮಲ್ಲು ಬಿಲ್ಲವ ಏರ್ಪಡಿಸಿದ್ದ ನಗರಸಭೆ ಕಾರ್ಮಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಸ್‌ಐ ಚೇತನ ಪಾಟೀಲ, ಕೊರೊನಾ ವೈರಸ್‌ ಬಗ್ಗೆ ಬಯಬೇಡ. ಆದರೂ ಆರೋಗ್ಯದ ದೃಷ್ಟಿಯಿಂದ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಘನತ್ಯಾಜ್ಯ ವಿಲೇವಾರಿ ಮಾಡುವ ಪೌರ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ದಿನನಿತ್ಯ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಮಲ್ಲು ಬಿಲ್ಲವ ಅವರು ಕಾರ್ಮಿಕರಿಗೆ ಮಾಸ್ಕ್ ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ. ಇದು ಇತರರಿಗೆ ಮಾದರಿಯಾಗಿದೆ. ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಹೇಳಿದರು.

ನಗರಸಭೆ ನೈರ್ಮಲ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಇತರರು ಕೆಮ್ಮುವಾಗ ಮತ್ತು ಸೀನುವಾಗ ಮೂಗಿಗೆ ಕರವಸ್ತ್ರ ಹಿಡಿಯಬೇಕು ಅಥವಾ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಲಸದ ನಡುವೆ ಏನಾದರು ತಿನುವುದು ಒಳ್ಳೆಯದಲ್ಲ. ಕೈಯನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆಯಬೇಕು ಅಥವಾ ಆಲ್ಕೋಹಾಲ್‌ ಆಧಾರಿತ ಹ್ಯಾಂಡ್‌ ರಬ್ಬರ್‌ ಬಳಸಬೇಕು. ಬಳಸಿದ ಟಿಶ್ಯೂ ಪೇಪರಗಳನ್ನು ತ್ಯಾಜಕ್ಕೆ ಎಸೆಯಬೇಕು. ವಿಪರೀತ ನೆಗಡಿ, ಕೆಮ್ಮ, ಬಿಟ್ಟು ಬಿಡದೆ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

Advertisement

ಕಾರ್ಮಿರ ಆರೋಗ್ಯ ರಕ್ಷಣೆಗಾಗಿ ಇಲಾಖೆಯಿಂದ ಕೂಡ ಕೆಲ ಪರಿಕರ ನೀಡಲಾಗಿದೆ. ಕಾರ್ಮಿಕರು ಕಡ್ಡಾಯವಾಗಿ ಪರಿಕರ ಬಳಸಬೇಕು. ಅವುಗಳನ್ನು ಮನೆಯಲ್ಲಿಡುವುದು ಸರಿಯಲ್ಲ. ಕಾರಣ ಕಾರ್ಮಿಕರು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡ ಮಲ್ಲು ಬಿಲ್ಲವ, ಗುತ್ತೇದಾರ ಶಿವುಕುಮಾರ ಅವಂಟಿ ಇದ್ದರು. ಶರಣಪ್ಪ, ದೇವಿಂದ್ರ, ಶೇಖಪ್ಪ, ಹಣಮಂತ ತೇಲ್ಕರ್‌, ಕಾಳಿಂಗಪ್ಪ ಸಾದು, ಶೇಖರ, ಚಂದ್ರಕಾಂತ, ಬಸವರಾಜ, ಶರಣು ಚಲುವಾದಿ, ಮಲ್ಲಿಕಾರ್ಜುನ, ಮಾನಪ್ಪ, ಹುಸನಮ್ಮ ಅಡಿವೆಮ್ಮ, ನೀಲಮ್ಮ, ದೇವಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next