Advertisement

“ಸುರಪುರ ನಾಯಕರು’ಪಠ್ಯ ಮುಂದುವರಿಕೆ

05:11 PM Jun 10, 2022 | Team Udayavani |

ಸುರಪುರ: 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿದ್ದ “ಸುರಪುರ ನಾಯಕರು’ ಶೀರ್ಷಿಕೆಯ ಪಠ್ಯವನ್ನು ಕೈಬಿಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಭರವಸೆ ನೀಡಿದ್ದಾರೆ ಎಂದು ಶಾಸಕ ರಾಜೂಗೌಡ ತಿಳಿಸಿದರು.

Advertisement

ಬೆಂಗಳೂರಿನಿಂದ ಗುರು ವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಸುರಪುರ ದೊರೆಗಳ ಕೊಡುಗೆ ಅನನ್ಯವಾಗಿದೆ. ಎರಡು ಶತಮಾನಗಳವರೆಗೆ ಜನಪರ ಆಡಳಿತ ನಡೆಸಿ ಜನಮಾನಸದಲ್ಲಿದ್ದಾರೆ. ಇವರ ಪಠ್ಯವನ್ನು ತೆಗೆಯುವುದರಿಂದ ಈ ಭಾಗದ ಜನ ಬೇಸರ ಪಟ್ಟುಕೊಳ್ಳುತ್ತಾರೆ ಎಂದು ಪತ್ರ ಬರೆದು ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಸಿಎಂ ಮತ್ತು ಶಿಕ್ಷಣ ಸಚಿವರು ಇಂದು ನನ್ನನ್ನು ತಮ್ಮ ಮನೆಗಳಿಗೆ ಗುರುವಾರ ಪ್ರತ್ಯೇಕವಾಗಿ ಕರೆದು ಈ ಕುರಿತು ಚರ್ಚೆ ನಡೆಸಿದರು ಎಂದರು.

ಪಠ್ಯವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಕೈಬಿಟ್ಟಿದ್ದರೆ ಮರು ಮುದ್ರಣ ಮಾಡಿ ಪುಸ್ತಕಗಳನ್ನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next