Advertisement

ಕುಂತುನಾಥನಿಗೆ ಮಹಾಭಿಷೇಕ-ನವಧಾನ್ಯ ಪೂಜೆ

05:06 PM Jan 12, 2020 | Naveen |

ಸುರಪುರ: ಸಂಗ್ವಿ ಮೋನಿಕಾ ಭರತಕುಮಾರ ಜೈನ್‌ ಸನ್ಯಾಸ ದೀಕ್ಷಾ ನಿಮಿತ್ತ ನಗರದ ಭಗವಾನ ಕುಂತುನಾಥಜೀ ಮಂದಿರದಲ್ಲಿ ಶನಿವಾರ ವಿವಿಧ ಪೂಜೆ ಸೇರಿದಂತೆ ವಿವಿಧ
ಧಾರ್ಮಿಕ ಕಾರ್ಯಕ್ರಮಗಳು ಜೈನ ಮುನಿ ಅಭಿಂಧನ ಚಂದ್ರ ಸಾಗರಜೀ ಸಾನ್ನಿಧ್ಯದಲ್ಲಿ ಜರುಗಿದವು.

Advertisement

ಧೀಕ್ಷಾರ್ಥಿಯನ್ನು ಶುಕ್ರವಾರ ಸಂಜೆ ಮನೆಯಿಂದ ದೇವಸ್ಥಾನದವರೆಗೆ ಕುದುರೆ
ಮೇಲೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಕುಂತುನಾಥ ಮೂರ್ತಿ ಪೂಜಕ ಸಂಘದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ದೇವಸ್ಥಾನದಲ್ಲಿ ಸನ್ಯಾಸತ್ವದ ವಿಧಿ  ವಿಧಾನಗಳು ಮತ್ತು ವಿಶೇಷ ಪೂಜೆ ನೆರವೇರಿದವು.

ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಧೀಕ್ಷಾರ್ಥಿ ಸಂಗ್ವಿ ಮೋನಿಕಾ ಜೈನ್‌ ಅವರಿಂದ
ಭಗವಾನ ಕುಂತುನಾಥ ಮೂರ್ತಿಗೆ ಮಹಾಭಿಷೇಕ ಮತ್ತು ಸಕರತ್ವ ಪೂಜೆ ನೆರವೇರಿತು. ಸಕರತ್ವ ಅಂಗವಾಗಿ ಒಂಭತ್ತು ಬಗೆಯ ವಿವಿಧ ಔಷಧಗಳ ನವ ಧಾನ್ಯ ಪೂಜೆ ನಂತರ ಬೆಳ್ಳಿ ತಟ್ಟೆಯಲ್ಲಿ ದೇವರಿಗೆ ಆರತಿ ಮಾಡಲಾಯಿತು.

ಜೈನ ಮುನಿ ಅಭಿಂಧನಚಂದ್ರ ಸಾಗರಜೀ ಸಾನಿಧ್ಯವಹಿಸಿ ಮಾತನಾಡಿ ಣಮೋಂ ಅರಿ
ಯಂತಾಣಂ, ಣಮೋಂ ಸಿದ್ದಾಣಂ, ಣಮೋ ಅಯರಿ ಯಾಣಂ. ಣಮೋಂ ಉವಜ್ಜಾ ಯಾಣಂ. ಣಮೋಂ ಲೋಏ ಸವ್ವಾ ಸಾಹೂಣಾಂ. ಎಂಬ ಪಂಚ ನಮೋಕಾರ
ಮಂತ್ರ ಜೈನ ಧರ್ಮದ ಸಂದೇಶವಾಗಿದೆ. ಇದು ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಪರಮ ಸಾಧನವಾಗಿದ್ದು, ಈ ಪಂಚ ತತ್ವಗಳನ್ನು ಜೀವನದಲ್ಲಿ ತಪ್ಪದೇ
ಅನುಸರಿಸಬೇಕು ಎಂದರು. ಜಿನಃ, ಜಿನೇಶ್ವರ ಅಂದರೆ ವೃಷಭ. ವೃಷಭತೀರ್ಥಂಕರರಿಂದಲೇ ವಿಶ್ವದಲ್ಲಿ ಜೈನ ಧರ್ಮ ಉಗಮವಾಗಿದೆ. ಇವರು ಜೈನ ಧರ್ಮದ ಮೂಲ ವಾರುಸುದಾರರು.
ಹಿಂದೂ ಧರ್ಮದಲ್ಲಿ ವೃಷಭನಾಥನಿಗೆ ಪರಮಾತ್ಮ ಎಂದು ಕರೆಯುತ್ತಾರೆ. ಈ ಬಗ್ಗೆ ಭಾಗವತದ ಮೊದಲನೇ ಸ್ಕಂದದಲ್ಲಿ ವೃಷಭ ದೇವನ ಉಪದೇಶಗಳ ಉಲ್ಲೇಖವಿದೆ.
ಅವರ ನಂತರ ಬಂದ ಮಹಾವೀರ ಮಹಾರಾಜ ಸೇರಿದಂತೆ ಎಲ್ಲ ತೀರ್ಥಂಕರರು ಜೈನ ಧರ್ಮದ ಏಳ್ಗೆ ಮತ್ತು ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಕುಂತುನಾಥ ಜೈನ ಶ್ವೇತಾಬಂರ ಮೂರ್ತಿಪೂಜಕ ಸಂಘದ ಪದಾ ಧಿಕಾರಿಗಳು
ಸದಸ್ಯರು, ಭಕ್ತರು, ಮಹಿಳೆಯರು ಮಕ್ಕಳು ಇದ್ದರು. ರವಿವಾರ ದೇವಸ್ಥಾನದಿಂದ ನಗರದ
ಪ್ರಮುಖ ಬೀದಿಗಳಲ್ಲಿ ಧೀಕ್ಷಾರ್ಥಿಯ ಭವ್ಯ ಮೆರವಣಿಗೆ ನಂತರ ಸಯಂ ರಂಗಲಾಗಿಯೋ ತಾಂಡಿ ಸಂಜೆ 7ಕ್ಕೆ ವಿಜಯ ಸಮಾರೋಹಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next