Advertisement

ದರ್ಶನ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ ಸೂರಪ್ಪ ಬಾಬು

12:20 PM Feb 16, 2023 | Team Udayavani |

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ದಿನವಾದ ಇಂದು ಅವರ ಬಹುನಿರೀಕ್ಷಿತ 56ನೇ ಸಿನಿಮಾದ ಟೈಟಲ್ ಅನಾವರಣವಾಗಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ‘ಕಾಟೇರ’ ಎಂದು ಹೆಸರಿಡಲಾಗಿದೆ. ಇದರ ನಡುವೆ ಅವರ ಮತ್ತೂಂದು ಹೊಸ ಚಿತ್ರ ಅನೌನ್ಸ್‌ ಆಗಿದೆ.

Advertisement

ಈ ಹಿಂದೆ “ಕೋಟಿಗೊಬ್ಬ’ “ಕೋಟಿಗೊಬ್ಬ-2′ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಸೂರಪ್ಪ ಬಾಬು ಅವರು ಈಗ ದರ್ಶನ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ. ದರ್ಶನ್‌ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಾಗಿದೆ. ಚಿತ್ರಕ್ಕೆ ನಿರ್ದೇಶಕ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ.

ರಗಡ್ ಲುಕ್ ನ ಕಾಟೇರ: ತರುಣ್‌ ಸುಧೀರ್‌ ನಿರ್ದೇಶನದ ಕಾಟೇರ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ಈಗಾಗಲೇ ತರುಣ್‌ ಹಾಗೂ ದರ್ಶನ್‌ ಕಾಂಬಿನೇಶನ್‌ನಲ್ಲಿ ಬಂದಿರುವ “ರಾಬರ್ಟ್‌’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ ಅವರಿಬ್ಬರ ಕಾಂಬಿನೇಶನ್‌ನ “ಕಾಟೇರ’ ಮೇಲೆ ನಿರೀಕ್ಷೆ ಇದೆ.

ಇದನ್ನೂ ಓದಿ:ಮಹಾರಾಷ್ಟ್ರದ ಲಾತೂರ್ ನಲ್ಲಿ ನಿಗೂಢ ಶಬ್ಧ; ಭೀತಿಯಲ್ಲೇ ರಾತ್ರಿ ಕಳೆದ ಗ್ರಾಮಸ್ಥರು!

ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ದರ್ಶನ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಪಕ್ಕಾ ರಗಡ್‌ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಪೋಸ್ಟರ್‌ ನ ಬ್ಯಾಕ್‌ ಡ್ರಾಪ್‌ ನಲ್ಲಿ ನೇಗಿಲು ಹೊತ್ತ ರೈತರ ಗುಂಪು, ಸಂಸತ್‌ ಭವನ… ಹೀಗೆ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next