Advertisement

ಶರಣರ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ

05:57 PM Nov 19, 2021 | Team Udayavani |

ಶಹಾಬಾದ: ಬುತ್ತಿ ಜಾತ್ರೆ ನೆಪದಲ್ಲಿ ಬಸವಾದಿ ಶರಣರ ಚಿಂತನೆಗಳ ಜ್ಞಾನ ಬುತ್ತಿ ಉಣಬಡಿಸುವ ಮೂಲಕ ನಮ್ಮಲ್ಲಿ ಅಂತರಂಗದ ಅರಿವು ಜಾಗೃತಗೊಳಿಸುವ ಕೆಲಸವನ್ನು ಬಸವ ಸಮಿತಿ ಮಾಡುತ್ತಿದೆ ಎಂದು ಶಿರಗುಪ್ಪಾದ ಶರಣ ವೆಂಕಾಟಾಪುರ ಹೇಳಿದರು.

Advertisement

ಬುಧವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗೇಶ್ವರ ದೇವಸ್ಥಾನ ಲಿಂಗಸ್ಥಾಪನೆ ನಿಮಿತ್ತ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಚಿಂತನೆ ಹಾಗೂ ಬುತ್ತಿ ಜಾತ್ರೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರ ಚಿಂತನೆಗಳು ಎಲ್ಲರಿಗೂ, ಎಲ್ಲ ಕಾಲಕ್ಕೂ ಬೇಕಾಗಿರುವಂತದ್ದು. ಅವರ ಮಾರ್ಗ ಅನುಸರಿಸಿ ಅಂತರಂಗ-ಬಹಿರಂಗ ಶುದ್ಧಿಯಾಗಬಹುದು. ಅಂತರಂಗ ಶುದ್ಧಿಗೆ ಇಷ್ಟಲಿಂಗ ಪೂಜೆ, ಬಹಿರಂಗದ ಶುದ್ಧಿಗೆ ಸತ್ಯ, ಶುದ್ಧ ಕಾಯಕ ಮಾಡಬೇಕು ಎಂದರು.

ಶಹಾಬಾದ-ವಾಡಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕನಕಪ್ಪ ದಂಡಗುಲಕರ್‌ ಮಾತನಾಡಿ, ಬಸವಾದಿ ಶರಣರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸರ್ವರಿಗೂ ಒಳ್ಳೆಯ ಮಾರ್ಗ ತೋರಿಸುವಂತಹ ದೊಡ್ಡ ಶಕ್ತಿ ಹೊಂದಿದೆ ಎಂದು ಹೇಳಿದರು.

ವಿಜಯಕುಮಾರ ಪಾಟೀಲ, ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಅತಿಥಿಗಳಾಗಿದ್ದರು. ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ ಅಧ್ಯಕ್ಷತೆ ವಹಿಸಿದ್ದರು. ರೇವಣಸಿದ್ಧಪ್ಪ ಮುಸ್ತಾರಿ, ಮೇಟಿ ಪಂಪಾಪತಿ, ವೀರಣ್ಣ ಕುಂಬಾರ, ಅಣ್ಣಾರಾವ್‌ ಹಳ್ಳಿ, ಶಿವಪುತ್ರ ಕುಂಬಾರ, ಕುಪೇಂದ್ರ ತುಪ್ಪದ್‌, ಸಂತೋಷ ಪಾಟೀಲ, ಗಿರಿಮಲ್ಲಪ್ಪ ವಸಂಗ, ಶಾಂತಪ್ಪ ಬಸಪಟ್ಟಣ, ಗುರಲಿಂಗಪ್ಪ ಪಾಟೀಲ, ಎಚ್‌. ವೈ. ರಡ್ಡೇರ್‌, ಹಣಮಂತರಾವ್‌ ದೇಸಾಯಿ, ತಿಪ್ಪಣ್ಣರೆಡ್ಡಿ, ಚಂದ್ರಕಾಂತ ಅಲಮಾ, ಶರಣಬಸಪ್ಪ ನಾಗನಳ್ಳಿ, ಸೋಮಶೇಖರ ಉಳ್ಳಾಗಡ್ಡಿ, ಭೀಮಾಶಂಕರ ದಂಡೋತಿ, ಮಲ್ಲಿಕಾರ್ಜುನ ಘಾಲಿ ಇತರರು ಇದ್ದರು. ನೀಲಕಂಠ ಮುಧೋಳಕರ್‌ ನಿರೂಪಿಸಿದರು, ಸ್ವಾಗತಿಸಿದರು, ಅಮರಪ್ಪ ಹೀರಾಳ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next