ಸುರಗಿರಿ: ಸಂಘ ಸಂಸ್ಥೆಗಳು ವಾರ್ಷಿಕೋತ್ಸವ, ಕ್ರೀಡಾಕೂಟಕ್ಕೆ ಸೀಮಿತ ವಾಗಬಾರದು,ಗ್ರಾಮದ ಕಷ್ಟ -ಸುಖಕ್ಕೆ ಸ್ಪಂದಿಸಿ ಜನಪರವಾಗಿ ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಪೆರ್ಮನ್ನೂರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲದ 13 ನೇ ವಾರ್ಷಿಕೋತ್ಸವ ಸಮಾರಂಭದದಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಾಡ್ಡನ ಗಾರ್ತಿ ಗಿರಿಗೆರೆ ರಾಮಕ್ಕ ಅವರನ್ನು ಗೌರವಿಸಲಾಯಿತು. ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ಶ್ವೇತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಅರ್ಚಕ ವಿಶ್ವೇಶರ ಭಟ್, ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಕೋಶಾಧಿಕಾರಿ ಅನಿತಾ ಪೃಥ್ವಿರಾಜ ಆಚಾರ್ಯ,ಸುರಗಿರಿ ಯುವಕ ಮಂಡಲದ ಅಧ್ಯಕ್ಷ ಧೀರಾಜ್ ಶೆಟ್ಟಿ ಮುಮ್ಮೆಟ್ಟು, ಮೊದಲಾದವರು ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷೆ ನಿರ್ಮಲಾ ನಾಯಕ್ ಸ್ವಾಗತಿಸಿದರು. ಗೀತಾ ಬಿ ಆಳ್ವ ವರದಿ ವಾಚಿಸಿದರು.ಶ್ಯಾಮಲಾ ಸಂದೇಶ ವಾಚಿಸಿದರು.ಶೋಭಾ ಶೆಟ್ಟಿ ಬಹುಮಾನಿತರ ವಿವರ ನೀಡಿದರು.ಶಶಿಕಲಾ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಅಮಿತಾ ಪಿ.ಶೆಟ್ಟಿ ವಂದಿಸಿದರು.ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.
ಜಾಗೃತಿ ಅತೀ ಅಗತ್ಯ
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸೀತಾರಾಮ ಶೆಟ್ಟಿ ಮಾತನಾಡಿ,ಯುವ ಜನಾಂಗ ಧಾರ್ಮಿಕತೆಯಿಂದ ದೂರ ಸಾಗುತ್ತಿದ್ದು,
ಇದರಿಂದ ಸನಾತನ ಧರ್ಮಕ್ಕೆ ಪೆಟ್ಟು ಬೀಳುತ್ತಿದ್ದೆ ಈ ಬಗ್ಗೆ ಎಚ್ಚರ ಹಾಗೂ ಜಾಗೃತಿ ಅತೀ ಅಗತ್ಯ ಎಂದರು.