ದೇವನಹಳ್ಳಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಂಕಾಂತರ ನಿಷೇಧ ಕಾಯ್ದೆಯಡಿ ವಿಧಾನಸಭೆ ಸ್ಪೀಕರ್ ಕ್ರಮಕೈಗೊಳ್ಳುವ ಅಧಿಕಾರವಿದೆ. ಈ ಸಂಬಂಧ ಗುರುವಾರ ಅಧಿವೇಶನದಲ್ಲಿ ಚರ್ಚೆಯಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.
ತಾಲೂಕಿನ ನಂದಿಬೆಟ್ಟ ರಸ್ತೆಯ ಕೋಡುಗುರ್ಕಿ ಹತ್ತಿರದ ಪ್ರಸ್ಟೀಜ್ ಗಾಲ್ಫ್ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.ಪಕ್ಷಾಂತರ ನಿಷೇಧ ಕಾನೂನು ಚೌಕಟ್ಟಿನಲ್ಲಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಧಾನಸಭೆ ಅಧ್ಯಕ್ಷರ ಕ್ರಮಕ್ಕೆ ಅವಕಾಶವಿದೆ. ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಡ ಹೇರಿಲ್ಲ. ಈ ಸಂಬಂಧ ಸದನದ ಇತಿಮಿತಿ ಕುರಿತು ಸಿಎಂ, ಸ್ಪೀಕರ್ ಗಮನಕ್ಕೆ ತರುತ್ತಾರೆ ಎಂದು ಹೇಳಿದರು.
ಸರ್ಕಾರ ರಚನೆಯಾದಾಗಿನಿಂದ ಬಿಜೆಪಿ, ಕುಮಾರಸ್ವಾಮಿಯವರನ್ನು ಚೂರಿಯಿಂದ ಇರಿದಂತೆ ವರ್ತಿಸುತ್ತಿದೆ. ರಾಜ್ಯದ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ನೇರ ಹೊಣೆ. ತೃಪ್ತರಾಗಲಿ, ಅತೃಪ್ತ ಶಾಸಕರು ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ.
ಅಂತೆಯೇ ಪಕ್ಷ ವಿಪ್ ಜಾರಿ ಮಾಡಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು. ನಮಗೆ ವಿಶ್ವಾಸ ಮತ ಸಿಗದಿದ್ದರೆ, ಮುಖ್ಯಮಂತ್ರಿ ರಾಜ್ಯಪಾಲರಿಗೆ ರಾಜೀನಾಮೆ ನೀಡಲಿದ್ದಾರೆ. ಸಂವಿಧಾನ ಬದ್ಧವಾಗಿ ಎಲ್ಲಾ ಪ್ರಕ್ರಿಯೆಗಳು ನಡೆಯಲಿದೆ ಎಂದು ಹೇಳಿದರು.
ಪ್ರಸ್ಟೀಜ್ ಗಾಲ್ಫ್ ರೆಸಾರ್ಟ್‌ಗೆ ಬಂದೋಬಸ್ತ್ ಮಾಡಲಾಗಿದೆ. ರೆಸಾರ್ಟ್‌ಗೆ ಬಂದರೂ ಸಹ ಅವರನ್ನು ಬಿಡುತ್ತಿಲ್ಲ. ಪೊಲೀಸರು ಅವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ. ಅನುಮತಿ ಇದ್ದರೆ ಮಾತ್ರ ಪ್ರವೇಶವಿದೆ. ಕಳೆದ 10 ದಿನಗಳಿಂದ ಜೆಡಿಎಸ್ ಶಾಸಕರುಗಳು ಇಲ್ಲಿಯೇ ಬೀಡು ಬಿಟ್ಟಿದ್ದಾರೆ.
ಇಲ್ಲಿಂದಲೇ ವಿಧಾನ ಮಂಡಲ ಅಧಿವೇಶನಕ್ಕೆ ದಿನದಿಂದ ಹೋಗಿ ಬಂದಿದ್ದಾರೆ. ಸುಮಾರು 24 ಶಾಸಕರುಗಳು ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಎಂದಿನಂತೆ ವಾಯು ವಿಹಾರ, ಯೋಗ, ಜಿಮ್, ಹೀಗೆ ತಮ್ಮ ದೇಹ ದಂಡನೆ ಮಾಡಿಕೊಳ್ಳು ತ್ತಿದ್ದಾರೆ.