Advertisement

SC: ಜಾಮೀನು ಅರ್ಜಿಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ

08:56 PM Dec 17, 2023 | Pranav MS |

ನವದೆಹಲಿ: ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಜಾಮೀನು ಹಾಗೂ ನಿರೀಕ್ಷಣಾ ಜಾಮೀನಿನ ಅರ್ಜಿಗಳನ್ನು ತ್ವರಿತವಾಗಿ ಪಟ್ಟಿ ಮಾಡಿ, ಅವುಗಳನ್ನು ಕೂಡಲೇ ಇತ್ಯರ್ಥಗೊಳಿಸಿ ಎಂದು ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣ ಸಂಬಂಧ ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್‌ ಹಾಗೂ ಸಂಜಯ್‌ಕುಮಾರ್‌ ಅವರಿದ್ದ ನ್ಯಾಯಪೀಠದ ವಿಚಾರಣೆ ವೇಳೆ ಈ ಸೂಚನೆ ಹೊರಬಿದ್ದಿದೆ.

Advertisement

ಜಾಮೀನು ಹಾಗೂ ನಿರೀಕ್ಷಣಾ ಜಾಮೀನಿನ ಅರ್ಜಿಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಹಾಗೂ ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿ, ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಿಗಳಿಗೆ ಆದೇಶ ಪ್ರತಿ ಕಳುಹಿಸುವಂತೆ ಡಿ.11ರ ಆದೇಶದಲ್ಲಿ ಸುಪ್ರೀಂ ತಿಳಿಸಿದೆ. ಈ ಹಿಂದೆ 2022ರಲ್ಲಿ ಕೂಡ ಸುಪ್ರೀಂ ಕೋರ್ಟ್‌ ಇದೇ ರೀತಿಯ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next