Advertisement

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

01:23 PM Sep 20, 2024 | Team Udayavani |

ನವದೆಹಲಿ: ಸಂಭಾವ್ಯ ಭದ್ರತಾ ಉಲ್ಲಂಘನೆಯಲ್ಲಿ(Security Breach) ಸುಪ್ರೀಂಕೋರ್ಟ್‌ ನ ಅಧಿಕೃತ ಯೂಟ್ಯೂಬ್‌ (YouTube) ಚಾನೆಲ್‌ ಅನ್ನು ಶುಕ್ರವಾರ (ಸೆ.20) ಹ್ಯಾಕ್‌ ಮಾಡಿ, ಅಮೆರಿಕ ಮೂಲದ ರಿಪ್ಪಲ್‌ ಲ್ಯಾಬ್ಸ್‌ ಡೆವಲಪ್‌ ಮಾಡಿರುವ ಕ್ರಿಪ್ಟೋಕರೆನ್ಸಿ ವಿಡಿಯೋಗಳನ್ನು ಪೋಸ್ಟ್‌ ಮಾಡಿರುವ ಘಟನೆ ನಡೆದಿದೆ.

Advertisement

ಸುಪ್ರೀಂಕೋರ್ಟ್‌ ಯೂಟ್ಯೂಬ್‌ ನಲ್ಲಿ ಕಲಾಪದ ನೇರಪ್ರಸಾರದ ಬದಲು XRP ವಿಡಿಯೋಗಳನ್ನು ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗಿದೆ. ಯೂಟ್ಯೂಬ್‌ ಚಾನೆಲ್‌ ನಲ್ಲಿ ಬ್ರಾಡ್‌ ಗಾರ್ಲಿಂಗ್‌ ಹೌಸ್‌ ಹೆಸರಿನಲ್ಲಿ ಖಾಲಿ ವಿಡಿಯೋವನ್ನು ಪ್ರದರ್ಶಿಸಿ, Ripple Responds To The SEC’s $ 2 Billion Fine! XRP price Prediction” ಎಂದು ನಮೂದಿಸಿದೆ.

ಯೂಟ್ಯೂಬ್‌ ಚಾನೆಲ್‌ ಹ್ಯಾಕ್‌ ಆದ ಘಟನೆ ಕುರಿತು ಸುಪ್ರೀಂಕೋರ್ಟ್‌ ಅಡ್ಮಿನಿಸ್ಟ್ರೇಶನ್‌ ತನಿಖೆ ನಡೆಸುತ್ತಿದೆ ಎಂದು Bar and Bench ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಏತನ್ಮಧ್ಯೆ ಯೂಟ್ಯೂಬ್‌ ಚಾನೆಲ್‌ ಲಿಂಕ್‌ ಅನ್ನು ಸುಪ್ರೀಂಕೋರ್ಟ್‌ ರಿಜಿಸ್ಟ್ರಿ ನಿಷ್ಕ್ರಿಯಗೊಳಿಸಿದೆ.

2018ರಲ್ಲಿ ಎಲ್ಲಾ ಸಾಂವಿಧಾನಿಕ ಪೀಠದಲ್ಲಿನ ವಿಚಾರಣೆಯನ್ನು ಲೈವ್‌ ಸ್ಟ್ರೀಮ್‌ ಮಾಡಲು ಸುಪ್ರೀಂಕೋರ್ಟ್‌ ನಿರ್ಧರಿಸಿದ್ದ ನಂತರ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ ನ ಯೂಟ್ಯೂಬ್‌ ಚಾನೆಲ್‌ ಅನ್ನು ಹ್ಯಾಕ್‌ ಮಾಡಿರುವ ಘಟನೆ ನಡೆದಿದೆ.

Advertisement

ಹ್ಯಾಕರ್ಸ್‌ ಗಳು ಬ್ರಾಡ್‌ ಗಾರ್ಲಿಂಗ್‌ ಹೌಸ್‌ ಸಿಇಒ ರೀತಿ ಸೋಗು ಹಾಕುವುದನ್ನು ತಡೆಯಲು ವಿಫಲವಾಗಿದ್ದಕ್ಕೆ ರಿಪ್ಪಲ್‌ ಸಂಸ್ಥೆ ಯೂಟ್ಯೂಬ್‌ ಮೇಲೆ ಮೊಕದ್ದಮೆ ಹೂಡಿತ್ತು. ಅಮೆರಿಕ ಮೂಲದ ಈ ಸಂಸ್ಥೆ ಕ್ರಿಪ್ಟೋಕರೆನ್ಸಿ ಎಕ್ಸ್‌ ಆರ್‌ ಪಿ ವಿನಿಮಯ ಜಾಲವನ್ನು ಹೊಂದಿದ್ದು, ಅಂತಾರಾಷ್ಟ್ರೀಯವಾಗಿ ಜನರು ಹಣ ಕಳುಹಿಸಲು ಈ ಕ್ರಿಪ್ಟೋಕರೆನ್ಸಿ ಬಳಸುವುದು ಸಂಸ್ಥೆಯ ಮುಖ್ಯ ಗುರಿಯಾಗಿತ್ತು ಎಂದು ವರದಿ ತಿಳಿಸಿದೆ.‌

Advertisement

Udayavani is now on Telegram. Click here to join our channel and stay updated with the latest news.

Next