Advertisement
“ನಿನ್ನೆ ಹೊರಬಂದ ವೀಡಿಯೊದಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಪರವಾಗಿ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದರು.
Related Articles
Advertisement
ದುಷ್ಕರ್ಮಿಗಳನ್ನು ಬಂಧಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು” ಎಂದ ಪೀಠವು “ವೀಡಿಯೊ ಮೇ 4 ಅಥವಾ 5 ರದ್ದು ಎಂದು ತಿಳಿದಿದೆ ಎಂದು ಹೇಳಿತು.
“ಹಿಂಸಾಚಾರದಲ್ಲಿ ಮಹಿಳೆಯರನ್ನು ಒಂದು ಸಾಧನವಾಗಿ ಬಳಸುವುದು ಅತ್ಯಂತ ಗಂಭೀರ ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಉಲ್ಲಂಘನೆಯಾಗಿದೆ” ಎಂದು ಸಿಜೆಐ ಗಮನಿಸಿದರು. ಘಟನೆಯ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರದಿಂದ ವಿಸ್ತೃತ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
“ನಾವು ಕಾರ್ಯನಿರ್ವಹಿಸಲು ಸರ್ಕಾರಕ್ಕೆ ಸ್ವಲ್ಪ ಸಮಯ ನೀಡುತ್ತೇವೆ, ಅಥವಾ ನಾವು ಕ್ರಮ ತೆಗೆದುಕೊಳ್ಳುತ್ತೇವೆ … ಇದು ತುಂಬಾ ಆಳವಾಗಿ ವಿಚಲಿತರಾಗುವ ಸಂಗತಿ” ಎಂದು ಸಿಜೆಐ ಟೀಕಿಸಿದರು.
ವಿಚಾರಣೆಗಾಗಿ ಭಾರತದ ಅಟಾರ್ನಿ ಜನರಲ್ ಮತ್ತು ಭಾರತದ ಸಾಲಿಸಿಟರ್ ಜನರಲ್ ಇಬ್ಬರೂ ನ್ಯಾಯಾಲಯದಲ್ಲಿ ಹಾಜರಿದ್ದರು. ಘಟನೆಯ ವಿಚಾರ ತಿಳಿದು ಸರ್ವೋಚ್ಚ ನ್ಯಾಯಾಲಯವು ತೀವ್ರವಾಗಿ ವಿಚಲಿತವಾಗಿದೆ. ಹೀಗಾಗಿ ಸರ್ಕಾರದ ಇಬ್ಬರು ಹಿರಿಯ ಕಾನೂನು ಅಧಿಕಾರಿಗಳನ್ನು ಈ ವಿಷಯಕ್ಕಾಗಿ ನ್ಯಾಯಾಲಯಕ್ಕೆ ಕರೆಯಲಾಗಿದೆ ಎಂದು ಸಿಜೆಐ ಹೇಳಿದರು.
ಈ ಘಟನೆ ಆತಂಕಕಾರಿಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಪ್ರತಿಕ್ರಿಯಿಸಿದ್ದಾರೆ. “ಇದು ಸ್ವೀಕಾರಾರ್ಹವಲ್ಲ ಎಂದು ನಾವು ಒಪ್ಪುತ್ತೇವೆ. ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಎಸ್‌ಜಿ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠಕ್ಕೆ ತಿಳಿಸಿದರು. ಜುಲೈ 28 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.