ನವದೆಹಲಿ: ಮುಂದಿನ ತಿಂಗಳ 1ನೇ ತಾರೀಕಿನಿಂದ ಸುಪ್ರೀಂಕೋರ್ಟ್‌ನಲ್ಲಿ ಭೌತಿಕ ವಿಚಾರಣೆ ಶುರುವಾಗಲಿದೆ.
ಕೆಲವು ಪ್ರಕರಣಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ. ಉಳಿದಂತೆ ಮಂಗಳವಾರದಿಂದ ಗುರುವಾರದ ವರೆಗೆ ಹೈಬ್ರಿಡ್ ಮಾದರಿಯ ವಿಚಾರಣೆ ನಡೆಸಲಾಗುತ್ತದೆ.
ಭೌತಿಕ ವಿಚಾರಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಸೆಕ್ರೆಟರಿ ಜನರಲ್ ಹಲವು ನಿಯಮಗಳನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಸೋಮವಾರ ಮತ್ತು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಇತರ ಕೇಸುಗಳ ವಿಚಾರಣೆ ನಡೆಸಲಾಗುತ್ತದೆ.
ಇದನ್ನೂ ಓದಿ:ಮೆಟ್ರೋ ಮಾರ್ಗ ರಾಮನಗರ, ರಾಜಾನಕುಂಟೆಯವರೆಗೆ ವಿಸ್ತರಣೆಯಾಗಬೇಕು: ಸಿಎಂ
ಉಳಿದವುಗಳ ವಿಚಾರಣೆಯನ್ನು ಭೌತಿಕವಾಗಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್ ಪ್ರತಿಬಂಧಕ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಇದುವರೆಗೆ ವರ್ಚುವಲ್ ವಿಧಾನದ ಮೂಲಕವೇ ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಾ ಬಂದಿದೆ.