Advertisement

ಉ.ಪ್ರ. ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

01:31 AM Oct 09, 2021 | Team Udayavani |

ಹೊಸದಿಲ್ಲಿ/ಲಖೀಂಪುರ್‌ಖೇರಿ: “ಕೇವಲ ಮಾತುಗಳು ಮಾತ್ರ. ಕೃತಿಯಲ್ಲಿ ಏನೂ ಇಲ್ಲ. ಲಖೀಂಪುರಖೇರಿಯಲ್ಲಿ ನಡೆದ ಹಿಂಸಾಚಾರ ನಡೆಸಿದವರ ವಿರುದ್ಧ ನಡೆಸಿದ ಕಾನೂನು ಕ್ರಮ ಏನೇನೂ ತೃಪ್ತಿ ತಂದಿಲ್ಲ’ಹೀಗೆಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಶುಕ್ರವಾರ ಕಟುವಾಗಿಯೇ ಆಕ್ಷೇಪ ಮಾಡಿದೆ.

Advertisement

ಎಂಟು ಮಂದಿಯ ಸಾವಿಗೆ ಕಾರಣರಾದವರನ್ನು ಯಾಕೆ ಬಂಧಿಸಿಲ್ಲ ಎಂಬ ವಿಚಾರಕ್ಕೆ ನ್ಯಾಯಪೀಠ ಉತ್ತರ ಪ್ರದೇಶ ಸರಕಾರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಜತೆಗೆ ಘಟನೆಯನ್ನು ಪುಷ್ಟೀ ಕರಿಸುವ ಸಾಕ್ಷ್ಯಗಳನ್ನು ಕಾಪಾಡಿಕೊಳ್ಳಬೇಕು ಮತ್ತು ತನಿಖೆಯನ್ನು ಮತ್ತೂಂದು ಸಂಸ್ಥೆಗೆ ವರ್ಗಾಯಿಸುವ ಇರಾದೆಯನ್ನೂ ನ್ಯಾಯಪೀಠ ವ್ಯಕ್ತಪಡಿಸಿದೆ.

“ತಪ್ಪಿತಸ್ಥರ ವಿರುದ್ಧ ಕಾನೂನು ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಜವಾಬ್ದಾರಿಯುತ ಸರಕಾರ ಮತ್ತು ಪೊಲೀಸ್‌ ಇಲಾಖೆಯನ್ನು ನ್ಯಾಯಪೀಠ ನಿರೀಕ್ಷಿಸುತ್ತಿದೆ. ಜನರಲ್ಲಿ ವಿಶ್ವಾಸಮೂಡಿಸಲು ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ನ್ಯಾಯಪೀಠ ಹೇಳಿದೆ. ರಾಜ್ಯ ಸರಕಾರದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ, “ರಾಜ್ಯ ಸರಕಾರ ಸೂಕ್ತ ಕ್ರಮ  ಗಳನ್ನು ಕೈಗೊಳ್ಳಲು ವಿಫ‌ಲವಾಗಿದೆ’ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ. ಶನಿವಾ ರದ ಒಳಗಾಗಿ ತನಿಖೆಯಲ್ಲಿ ಉಂಟಾಗಿರುವ ಲೋಪ ಸರಿಪಡಿಸಲಾಗುತ್ತದೆ ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡಿದ್ದಾರೆ.

ಸಿಬಿಐ ತನಿಖೆ ಸೂಕ್ತವಲ್ಲ: ಎಂಟು ಮಂದಿಯ ಸಾವಿಗೆ ಕಾರಣವಾಗಿರುವ ಹಿಂಸಾತ್ಮಕ ಘಟನೆಗಳಿಗೆ ಸಿಬಿಐ ತನಿಖೆ ಸೂಕ್ತವಲ್ಲ ಎಂದಿದೆ ನ್ಯಾಯಪೀಠ. “ನಾವೂ ಕೂಡ ಈ ಬಗ್ಗೆ ಉತ್ಸಾಹ ಹೊಂದಿಲ್ಲ. ಅದಕ್ಕೆ ಕಾರಣಗಳೇನು ಎಂದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದೆ. ಘಟನೆಗೆ ಕಾರಣವನ್ನು ತಿಳಿಯಲು ಸಿಬಿಐ ಮೂಲಕ ತನಿಖೆಗೆ ನಡೆಸಬೇಕು ಎಂದು ಸಲ್ಲಿಕೆಯಾಗಿದ್ದ ಮನವಿಯ ವಿಚಾರಣೆ ವೇಳೆ ಈ ಅಭಿ ಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬೇರೊಂದು ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ವಿಚ್ಛೇದನಕ್ಕೆ “ಅಕ್ರಮ ಸಂಬಂಧ” ಕಾರಣ ಎಂದವರಿಗೆ ಉತ್ತರ ಕೊಟ್ಟ ನಟಿ ಸಮಂತಾ

Advertisement

ಒಟ್ಟೂ ಘಟನೆಗೆ ಕಾರಣರಾಗಿರುವ ಕೇಂದ್ರ ಸಚಿವನ ಪುತ್ರನ ವಿರುದ್ಧ ರಾಜ್ಯ ಸರಕಾರವೇಕೆ ಮೃದು ಧೋರಣೆ ತಳೆದಿದೆ. ಅವರ ವಿರುದ್ಧದ ಆರೋಪಗಳು ಗಂಭೀರ ಎಂದು ನ್ಯಾಯವಾದಿ ಸಾಳ್ವೆಗೆ ಸಿಜೆಐ ರಮಣ ತಿಳಿಸಿದರು.

ವಿಚಾರಣೆಗೆ ಗೈರು: ಒಟ್ಟೂ ಘಟನೆಗೆ ಕಾರಣರಾಗಿ ರುವ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ ಕುಮಾರ್‌ ಮಿಶ್ರಾ ಪುತ್ರ ಆಶಿಶ್‌ ಮಿಶ್ರಾ ಶುಕ್ರವಾರವೂ ವಿಚಾರಣೆಗೆ ಆಗಮಿಸಲಿಲ್ಲ. ಹೀಗಾಗಿ, ಪೊಲೀಸರು ಹೊಸತಾಗಿ ಸಮನ್ಸ್‌ ನೀಡಿದ್ದು, ಶನಿವಾರ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಲಖೀಂಪುರ್‌ಖೇಯಲ್ಲಿರುವ ಅವರ ನಿವಾಸಕ್ಕೆ ನೋಟಿಸ್‌ ಅಂಟಿಸಲಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಅ.3ರ ಘಟನೆಯಲ್ಲಿ ಪುತ್ರನ ಪಾತ್ರವಿಲ್ಲ ಮತ್ತು ಶನಿವಾರ ವಿಚಾರಣೆಗೆ ಹಾಜ ರಾಗಲಿದ್ದಾನೆ ಎಂದು ಸಚಿವ ಅಜಯ ಕುಮಾರ್‌ ಮಿಶ್ರಾ ಲಕ್ನೋದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಏಳು ದಿನಗಳಲ್ಲಿ ಘಟನೆಗೆ ಕಾರಣರಾದವರನ್ನು ಬಂಧಿಸದೇ ಇದ್ದಲ್ಲಿ ಪ್ರಧಾನಿಯವರ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next