Advertisement

ಆಪರೇಷನ್ ಕಮಲದ ವಿರುದ್ಧ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಬೇಕು: ಡಿಕೆ ಶಿವಕುಮಾರ್

02:51 PM Oct 29, 2022 | Team Udayavani |

ಶಿವಮೊಗ್ಗ: ಆಪರೇಷನ್ ಕಮಲದ ವಿರುದ್ಧ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಕ್ರಮ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಇದಕ್ಕೊಂದು ಕೊನೆ ಕಾಣಿಸಬೇಕು. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳೇ ಸೋಮೋಟೊ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹುಟ್ಟಿರುವುದೇ ಭ್ರಷ್ಟಾಚಾರದಿಂದ, ಆಪರೇಷನ್ ಲೋಟಸ್ ನಿಂದ. ತೆಲಂಗಾಣದಲ್ಲಿ ಆಪರೇಷನ್ ಕಮಲ ನಡೆದಿದೆ, ರೆಡ್ ಹ್ಯಾಂಡ್ ಆಗಿ ಕೋಟಿ ಕೋಟಿ ಸಿಕ್ಕಿದೆ. ರಾಜ್ಯದಲ್ಲಿ ಶಾಸಕ ಶ್ರೀನಿವಾಸ್ ಗೌಡರು ಈ ಬಗ್ಗೆ ಅಧಿವೇಶನದಲ್ಲಿ ಹೇಳಿದ್ದರು. ಅದನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದರು.

ಇದನ್ನೂ ಓದಿ:ಗುಜರಾತ್ ಚುನಾವಣೆ: ನಿಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ…ಅಭಿಯಾನಕ್ಕೆ ಆಪ್ ಚಾಲನೆ

ಆಪರೇಷನ್ ಕಮಲ ಮನಿ ಲ್ಯಾಂಡ್ ರಿಂಗ್ ಆಕ್ಟ್ , ಪಿಎಂಎಲ್ ಆಕ್ಟ್ ಅನ್ವಯವಾಗುವುದಿಲ್ಲವೇ? ಆಪರೇಷನ್ ಕಮಲದ ಸತ್ಯಾಸತ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ಮಾನಿಟರಿಂಗ್ ಮಾಡಬೇಕು. ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿ ಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next