Advertisement
ಪ್ರಕರಣದ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಗುರುವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. ಈ ವೇಳೆ, ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ಪ್ರಕರಣವಿದ್ದಾಗ, ಪ್ರಕರಣದ ಕಕ್ಷಿದಾರರಾಗಿದ್ದವರೇ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲೂ ಕಕ್ಷಿದಾರರಾಗಿರಬೇಕೆಂದು, ಇತ್ತೀಚೆಗೆ ಪ್ರಕರಣದ ಬಗ್ಗೆ ವಿವಿಧ ನಾಗರಿಕರು, ಸಂಸ್ಥೆಗಳು ಸಲ್ಲಿಸಿರುವ ಮನವಿಗಳನ್ನು ಆನಂತರ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಸೂಚಿಸಿತು. ಅಲ್ಲದೆ, ಹೊಸ ಕಕ್ಷಿದಾರರು ಸಲ್ಲಿಸಿರುವ ದಾಖಲೆಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಿ 2 ವಾರಗಳ ಒಳಗೆ ನೀಡುವಂತೆ ನ್ಯಾಯಪೀಠ ಸೂಚಿಸಿತು. ನಂತರ ಮುಂದಿನ ವಿಚಾರಣೆ ಮಾ.14ಕ್ಕೆ ನಡೆಯಲಿದೆ. Advertisement
ಅಯೋಧ್ಯೆ ಸಾಧಾರಣ ಭೂ ವಿವಾದ: ಸುಪ್ರೀಂಕೋರ್ಟ್
09:10 AM Feb 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.