Advertisement

ಕೋವಿಡ್ 19 ಸೋಂಕಿತರ ಮನೆ ಹೊರಗೆ ಪೋಸ್ಟರ್ ಅಂಟಿಸುವಂತಿಲ್ಲ: ಸುಪ್ರೀಂಕೋರ್ಟ್

01:17 PM Dec 09, 2020 | Nagendra Trasi |

ನವದೆಹಲಿ:ಕೋವಿಡ್ 19 ಸೋಂಕಿತ ವ್ಯಕ್ತಿಯ ಮನೆಯ ಹೊರಗೆ ಪೋಸ್ಟರ್ ಅಥವಾ ಸೂಚನಾ ಫಲಕಗಳನ್ನು ಅಂಟಿಸಬಾರದು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಅಶೋಕ್ ಭೂಷಣ್, ಜಸ್ಟೀಸ್ ಆರ್. ಸುಭಾಶ್ ರೆಡ್ಡಿ ಹಾಗೂ ಜಸ್ಟೀಸ್ ಎಂ.ಆರ್.ಶಾ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆ ನೀಡಿದೆ.

Advertisement

ಡಿಎಂಎ ಅಡಿಯಲ್ಲಿ ಅಧಿಕಾರಿಗಳು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾಗ ಮಾತ್ರ ರಾಜ್ಯ ಸರ್ಕಾರ ಇಂತಹ ಪೋಸ್ಟರ್ ಗಳನ್ನು ಅಂಟಿಸಬಹುದಾಗಿದೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಕೋವಿಡ್ 19 ಸೋಂಕಿತರ ಮನೆಯ ಹೊರಗೆ ಪೋಸ್ಟರ್ ಅಂಟಿಸುವುದು ತಾರತಮ್ಮಕ್ಕೆ ಕಾರಣವಾಗಲಿದೆ ಎಂದು ದೂರಿ ಪೋಸ್ಟರ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕಳೆದ ವಾರ ಆದೇಶವನ್ನು ಕಾಯ್ದಿರಿಸಿತ್ತು.

ಕೋವಿಡ್ 19 ರೋಗಿಗಳ ಮನೆಯ ಹೊರಗೆ ಪೋಸ್ಟರ್ ಅಂಟಿಸಬಾರದು ಎಂಬ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ಹೊರಡಿಸಲಿ ಎಂದು ಜಸ್ಟೀಸ್ ಭೂಷಣ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿದರು. ಈ ಸಲಹೆಯನ್ನು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳಿಗೆ ನೀಡಿರುವುದಾಗಿ ಮೆಹ್ತಾ ಹೇಳಿದರು.

ಈಗಾಗಲೇ ದಿಲ್ಲಿ ಹೈಕೋರ್ಟ್ ಈ ಬಗ್ಗೆ ನೀಡಿರುವ ಆದೇಶದಂತೆ, ಕೋವಿಡ್ 19 ರೋಗಿಗಳ ಮನೆಯ ಹೊರಗೆ ಹೆಸರಿನ ಜತೆಗೆ ಪೋಸ್ಟರ್ ಅಂಟಿಸುತ್ತಿರುವುದರಿಂದ ಇದು ಎಲ್ಲೆಡೆ ಪ್ರಸಾರವಾಗುವ ಮೂಲಕ ಕೋವಿಡ್ ಸೋಂಕು ಪೀಡಿತರನ್ನು ಬಹಿಷ್ಕೃತರು ಎಂಬಂತೆ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿತ್ತು.

Advertisement

ಕೋವಿಡ್ 19 ರೋಗಿಗಳ ಮನೆಯ ಹೊರಗೆ ಪೋಸ್ಟರ್ ಅಂಟಿಸುವುದನ್ನು ಪ್ರಶ್ನಿಸಿ ವಕೀಲ ಕುಶ್ ಕಾರ್ಲಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ರೋಗಿಗಳ ಗುರುತನ್ನು ಬಹಿರಂಗಪಡಿಸುವುದು ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಅಷ್ಟೇ ಅಲ್ಲ ನಮ್ಮ ಸಂವಿಧಾನ ಕೂಡಾ ಇದನ್ನು ಒಪ್ಪುವುದಿಲ್ಲ. ಅನಾರೋಗ್ಯ ಮತ್ತು ದೈಹಿಕ ತೊಂದರೆಯ ಕಾರಣದಿಂದ ತಾರತಮ್ಮ ಎಸಗುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next