Advertisement
ಜತೆಗೆ, ಸಿಎಂ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಎಂಬಿ ಪಾಟೀಲ್, ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೂ ನ್ಯಾ| ಹೃಷಿಕೇಶ್ ರಾಯ್ ಮತ್ತು ನ್ಯಾ| ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಡೆ ತಂದಿದೆ.
Related Articles
ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಕ್ರಿಮಿನಲ್ ಕೇಸು ಹಾಕಲಾಗಿದೆ. ಇದು ಸಂವಿಧಾನದ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಎಂದು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಈ ವೇಳೆ, ಪ್ರತಿಕ್ರಿಯಿಸಿದ ನ್ಯಾ| ಮಿಶ್ರಾ, ಪ್ರತಿಭಟನ ಮೆರವಣಿಗೆಗೆ ಅನುಮತಿ ಪಡೆಯಲಾಗಿತ್ತೇ? ಏಕಾಏಕಿ ಸಾವಿರಾರು ಮಂದಿ ಒಂದು ಪ್ರದೇಶದಲ್ಲಿ ಸೇರಿ, ನಾವು ಪ್ರತಿಭಟನೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸುವುದು ಸರಿಯೇ? ಇದನ್ನೇ ಜನಸಾಮಾನ್ಯರು ಮಾಡಿರುತ್ತಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ರಾಜಕಾರಣಿಗಳು ಮಾಡಿದರೆ ಸರಿ ಎನ್ನುವುದು ನಿಮ್ಮ ವಾದವೇ’ ಎಂದು ಖಡಕ್ಕಾಗಿ ಪ್ರಶ್ನಿಸಿದ್ದೂ ಕಂಡುಬಂತು.
Advertisement