Advertisement

ಭೀಮಾ ಕೋರೇಗಾಂವ್‌ : ಸುಪ್ರೀಂನಿಂದ ಥಾಪರ್‌ ಅರ್ಜಿ ತಿರಸ್ಕೃತ

05:39 PM Oct 24, 2018 | udayavani editorial |

ಹೊಸದಿಲ್ಲಿ : ಭೀಮಾ ಕೋರೇಗಾಂವ್‌ ಪ್ರಕರಣದಲ್ಲಿನ  ಐವರು ಕಾರ್ಯಕರ್ತರ ಬಂಧನದ ಬಗ್ಗೆ ಎಸ್‌ಐಟಿ ತನಿಖೆಯ ಕೋರಿಕೆಯನ್ನು ತಿರಸ್ಕರಿಸಿ ನೀಡಲಾಗಿರುವ ತೀರ್ಪಿನ ಪುನರ್‌ ವಿಮರ್ಶೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಆಗ್ರಹಿಸಿರುವ ಇತಿಹಾಸ ತಜ್ಞ ರೋಮಿಲಾ ಥಾಪರ್‌ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. 

Advertisement

ಅಂತೆಯೇ ಪ್ರಕರಣದ ತನಿಖೆಯನ್ನು ಮುಂದುವರಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಈ ವರ್ಷ ಜನವರಿಯಲ್ಲಿ ಭುಗಿಲೆದ್ದಿದ್ದ ಭೀಮಾ ಕೋರೇಂಗಾಂವ್‌ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಮಾವೋ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ  ಎಡ ಪಂಥೀಯ ಕಾರ್ಯಕರ್ತರ ಬಂಧನ ನಡೆದಿರುವುದನ್ನು ಪ್ರಶ್ನಿಸಿ ಥಾಪರ್‌ ಮತ್ತು ಇತರ ನಾಲ್ವರು ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. 

ಭೀಮಾ ಕೋರೇಗಾಂವ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಎಲ್ಲ ಐವರು ಕಾಯರಕರ್ತರು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘವಿ ಮೂಲಕ ಥಾಪರ್‌ ಮತ್ತು ಇತರರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next