ನವದೆಹಲಿ: 28 ವರ್ಷಗಳಷ್ಟು ಹಳೆಯದಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ್ದ ವಿಶೇಷ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಸುರೇಂದ್ರ ಕುಮಾರ್ ಯಾದವ್ ಅವರಿಗೆ ನೀಡಿದ್ದ ಭದ್ರತೆಯನ್ನು ಮುಂದುವರಿಸಲು ಸುಪ್ರೀಂಕೋರ್ಟ್ (ನವೆಂಬರ್ 02, 02020) ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸ್ಥಾಪಕ ಸದಸ್ಯ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಉತ್ತರಪ್ರದೇಶ ಲಕ್ನೋ ವಿಶೇಷ ಕೋರ್ಟ್ ಜಡ್ಜ್ ಯಾದವ್ ಅವರು ಸೆಪ್ಟೆಂಬರ್ 30ರಂದು ಖುಲಾಸೆಗೊಳಿಸಿ ಅಂತಿಮ ತೀರ್ಪು ಪ್ರಕಟಿಸಿದ್ದರು.
ಎಸ್ ಕೆ ಯಾದವ್ (60ವರ್ಷ) ಅವರು 2019ರಲ್ಲಿ ನಿವೃತ್ತಿಯಾಗಿದ್ದರು. ಆದರೆ 2015ರಿಂದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನಿಟ್ಟಿನಲ್ಲಿ ಯಾದವ್ ಅವರ ಸೇವಾವಧಿಯನ್ನು ಸುಪ್ರೀಂಕೋರ್ಟ್ ವಿಸ್ತರಿಸಿತ್ತು. ತೀರ್ಪು ಪ್ರಕಟಿಸಿದ ದಿನ ಯಾದವ್ ಅವರ ಸೇವಾವಧಿಯ ಕೊನೆಯ ದಿನವಾಗಿತ್ತು.
ಇದನ್ನೂ ಓದಿ: ಅಣ್ಣಾವ್ರ ಮೊಮ್ಮಗ ಈಗ ಯುವ ರಣಧೀರ ಕಂಠೀರವ
ಸಮಾಜಘಾತುಕ ಶಕ್ತಿಗಳು ಮಸೀದಿಯನ್ನು ಧ್ವಂಸಗೊಳಿಸಿದ್ದು, ಈ ಸಂದರ್ಭದಲ್ಲಿ ಆರೋಪಿತ ಮುಖಂಡರು ಘಟನೆಯನ್ನು ತಡೆಯಲು ಯತ್ನಿಸಿದ್ದರು. ಆದರೆ ಪ್ರಚೋನಕಾರಿ ಭಾಷಣದ ಆಧಾರದ ಮೇಲೆ ದೋಷಿತರು ಎಂದು ಹೇಳಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದರು.