Advertisement
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಮತ್ತು ಸಿ. ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು ಕೇಂದ್ರ ಮತ್ತು ಐಒಎ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಗಳನ್ನು ಗಮನಿಸಿತು. ವಿಶ್ವ ಕ್ರೀಡಾ ಸಂಸ್ಥೆಯು ಸಿಒಎಯಂತಹ ಯಾವುದೇ ಚುನಾಯಿತವಲ್ಲದ ಸಂಸ್ಥೆಗಳನ್ನು ಗುರುತಿಸು ವುದಿಲ್ಲ ಮತ್ತು ಇದರ ಪರಿಣಾಮವಾಗಿ ಭಾರತವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವ ಸಾಧ್ಯತೆಯಿದೆ.
Related Articles
Advertisement
ಪೀಠದ ಮೂರನೇ ನ್ಯಾಯಾಧೀಶ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ಮೂಲತಃ ದಿಲ್ಲಿ ಹೈಕೋರ್ಟ್‌ನ ಆದೇಶದಿಂದ ಉದ್ಭವಿಸಿದ ಈ ಪ್ರಕರಣವನ್ನು ಆಲಿಸಲು ಬಯಸುವುದಿಲ್ಲ ಎಂದು ಸಿಜೆಐ ಹೇಳಿದರು.
ಮಧ್ಯಾಂತರ ಪರಿಹಾರವನ್ನು ಪೀಠದಲ್ಲಿರುವ ಇಬ್ಬರು ನ್ಯಾಯಾಧೀಶರು ನೀಡಬಹುದು ಎಂದು ಕಾನೂನು ಅಧಿಕಾರಿ ಹೇಳಿದರು.
ಪ್ರಸ್ತುತ ಹೈಕೋರ್ಟ್‌ನ ಆದೇಶದ ಕಾರಣದಿಂದ ಭಾರತವು ಒಲಿಂಪಿಕ್ ಮತ್ತು ಎಲ್ಲ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ವಕೀಲರು (ಐಒಎ) ಮತ್ತು ಸಾಲಿಸಿಟರ್ ಜನರಲ್ ಪೀಠದ ಮುಂದೆ ಹೇಳಿದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಾವು ನಿರ್ದೇಶನ ನೀಡುತ್ತೇವೆ. ಆರೋಪವನ್ನು ಸಿಒಎಗೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸೋಮವಾರ ಸೂಕ್ತ ಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡುವಂತೆ ನಾವು ನಿರ್ದೇಶಿಸುತ್ತೇವೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ವಿರೋಧ: ಐಒಎ :
ಹೊಸದಿಲ್ಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಗುರುವಾರ ಸುಪ್ರೀಂ ಕೋರ್ಟ್ ನೀಡಿದ ಮಧ್ಯಾಂತರ ಪರಿಹಾರ ಆದೇಶವನ್ನು ಸ್ವಾಗತಿಸಿದೆ. ಆದರೆ ರಾಷ್ಟ್ರೀಯ ಕ್ರೀಡಾ ನೀತಿಯ “ವಿವಾದಾತ್ಮಕ” ಷರತ್ತುಗಳಾದ ಅಧಿಕಾರಿಗಳ ಅವಧಿಯ ಮಾರ್ಗಸೂಚಿ ಮತ್ತು ರಾಜ್ಯ ಸಂಸ್ಥೆಗಳ ಮತದಾನದ ಹಕ್ಕುಗಳನ್ನು ಪ್ರಶ್ನಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.