Advertisement

ವಿಚ್ಛೇದಿತ ಪತ್ನಿಗೆ ಸಂಬಳದ ಶೇ.25ರಷ್ಟು ಜೀವನಾಂಶ

03:45 AM Apr 22, 2017 | Team Udayavani |

ನವದೆಹಲಿ: ವಿಚ್ಛೇದನ ಪಡೆದ ಪತ್ನಿ ಜೀವನಾಂಶಕ್ಕಾಗಿ ಇನ್ನು ಮುಂದೆ ಚಿಂತಿಸಬೇಕಿಲ್ಲ. ಸುಪ್ರೀಂಕೋರ್ಟ್‌ ಇಂಥ ಮಹಿಳೆಯರಿಗೆ ನೆರವಾಗುವಂಥ ಮಹತ್ವದ ಆದೇಶವನ್ನು ನೀಡಿದ್ದು, “ಪತಿ ಎನಿಸಿಕೊಂಡವನು ತನ್ನ ಸಂಬಳದ ಶೇ. 25ರಷ್ಟನ್ನು ಪತ್ನಿಯ ಜೀವನಾಂಶಕ್ಕಾಗಿ ನೀಡಬೇಕೆನ್ನುವ ಮಾನದಂಡ ನಿಗದಿಪಡಿಸಿದೆ. ಇದು ಸಹಜವಾಗಿ ವಿಚ್ಛೇದಿತ ಪತ್ನಿ ಎನಿಸಿಕೊಂಡವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Advertisement

ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಆದೇಶ ನೀಡಿದೆಯಾದರೂ, ಈ ಪ್ರಕರಣದಲ್ಲಿ ಸಂಬಳದ ಪಾಲನ್ನು ಶೇ. 21ಕ್ಕೆ ಇಳಿಸಿ ಆದೇಶಿಸಿದೆ. ಪತಿ ಬೇರೊಂದು ಮದುವೆಯಾಗಿದ್ದು, ಸಂಸಾರ ಸರಿದೂಗಿಸಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಬಳದ ಶೇ.21ರಷ್ಟು ನೀಡಲು ಆದೇಶಿಸಿದೆ. ಇದೇ ವೇಳೆ ಪತಿಯಿಂದ ದೂರವಾದ ಪತ್ನಿ ಸಮಾಜದಲ್ಲಿ ಘನತೆಯಿಂದ ಜೀವನ ನಡೆಸಲು, ನಿರ್ವಹಣೆಗೆ ಅಗತ್ಯ ಹಣ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಆರ್‌.ಭಾನುಮತಿ ಮತ್ತು ಎಂ.ಎಂ. ಶಾಂತನಗೌಡರ್‌ ಅವರನ್ನೊಳಗೊಂಡ ನ್ಯಾಯಪೀಠ ಪಶ್ಚಿಮ ಬಂಗಾಳದ ದಂಪತಿಯ ಪ್ರಕರಣದ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪತಿ 95,527 ರೂ. ಮಾಸಿಕ ವೇತನ ಪಡೆಯುತ್ತಿದ್ದು, ಪ್ರತಿ ತಿಂಗಳು ಮೊದಲ ಪತ್ನಿ ಮತ್ತು ಆಕೆಯ ಪುತ್ರನ ಜೀವನಕ್ಕೆಂದು ಪ್ರತಿ ತಿಂಗಳು 20,000 ರೂ. ನೀಡಬಹುದೆಂದು ಹೇಳಿದೆ.

ಈ ವ್ಯಕ್ತಿ ಕೋಲ್ಕತಾ ಹೈಕೋರ್ಟ್‌ ಪ್ರತಿ ತಿಂಗಳು 23,000 ರೂ. ನೀಡುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ. ಆದರೆ ಸುಪ್ರೀಂಕೋರ್ಟ್‌ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿದ್ದು, ಇನ್ನೊಂದು ಮದುವೆ ಆಗಿರುವ ಬಗ್ಗೆ ದಾಖಲೆಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ 3 ಸಾವಿರ ರೂ. ಕಡಿಮೆಗೊಳಿಸಿ ಪ್ರತಿ ತಿಂಗಳು 20 ಸಾವಿರ ರೂ. ನೀಡಲು ಆದೇಶ ನೀಡಿದೆ. ಪತ್ನಿ ಜೀವನಾಂಶಕ್ಕಾಗಿ 2003ರಿಂದಲೂ ಕಾನೂನು ಹೋರಾಟ ನಡೆಸಿಕೊಂಡು ಬಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next