Advertisement

ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಡಿ ಗೃಹ ಬಂಧನಕ್ಕೆ ಅವಕಾಶ : ಸುಪ್ರೀಂಕೋರ್ಟ್‌

11:40 PM May 12, 2021 | Team Udayavani |

ನವದೆಹಲಿ: ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಡಿ ಗೃಹಬಂಧನದಲ್ಲಿಡಬಹುದು ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ.

Advertisement

ಜೈಲುಗಳಲ್ಲಿ ಈಗಾಗಲೇ ಕೈದಿಗಳು ತುಂಬಿ ತುಳುಕುತ್ತಿದ್ದಾರೆ. ಜೊತೆಗೆ, ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗುವವರೆಗೂ ಅವರನ್ನು ನೋಡಿಕೊಳ್ಳಲು ಜನರ ತೆರಿಗೆ ಹಣ ವ್ಯಯ ಮಾಡಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಆರೋಪಿಗಳನ್ನು ಗೃಹಬಂಧನದಲ್ಲಿಡಬಹುದು ಎಂದು ನ್ಯಾಯಪೀಠ ಹೇಳಿದೆ.

ಆರೋಪಿಯ ವಯಸ್ಸು, ಆರೋಗ್ಯ ಪರಿಸ್ಥಿತಿ, ಆತನ ಮೇಲಿರುವ ಆರೋಪಗಳ ರೀತಿಯನ್ನು ಪರಿಗಣಿಸಿ ಆರೋಪಿಯನ್ನು ಕೇವಲ ಗೃಹ ಬಂಧನದಲ್ಲಿ ಇಟ್ಟರೆ ಸಾಕೇ ಅಥವಾ ಅವರನ್ನು ಜೈಲಿನಲ್ಲೇ ಇಡಬೇಕೇ ಎಂಬ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಲಲಿತ್‌ ಹಾಗೂ ನ್ಯಾ. ಕೆ.ಎಂ. ಜೋಸೆಫ್ ಅವರುಳ್ಳ ನ್ಯಾಯಪೀಠ, “”ಭಾರತೀಯ ಜೈಲುಗಳಲ್ಲಿ ಸದ್ಯಕ್ಕೆ ಸ್ಥಳದ ಸಮಸ್ಯೆಯಿದೆ. ಇನ್ನು, ಜೈಲುಗಳಲ್ಲಿನ ಕೈದಿಗಳ ನಿರ್ವಹಣೆಗಾಗಿಯೇ ವಾರ್ಷಿಕವಾಗಿ 6,818.1 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಭಾರತದಂಥ ರಾಷ್ಟ್ರದಲ್ಲಿ ಇದೊಂದು ದುಬಾರಿ ಖರ್ಚುವೆಚ್ಚ. ಈ ಎರಡನ್ನು ಪರಿಶೀಲಿಸಿದಾಗ ಆರೋಪಿಯನ್ನು ಗೃಹಬಂಧನದಲ್ಲಿ ಇಡುವುದು ಸಮಂಜಸ ಎನಿಸುತ್ತದೆ” ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next