Advertisement

ದ್ವೇಷ ಭಾಷಣ ಮಾರಕ: ಸುಪ್ರೀಂ ಕೋರ್ಟ್‌

11:46 PM Jan 13, 2023 | Team Udayavani |

ಹೊಸದಿಲ್ಲಿ: ದ್ವೇಷ ಭಾಷಣಗಳು ಸಮಾಜಕ್ಕೆ ತೀರಾ ಮಾರಕವಾಗಿದ್ದು, ಅಂಥ ಸುದ್ದಿ ಬಿತ್ತರಿಸುವ ಸಮಯದಲ್ಲಿ ದೃಶ್ಯ ಮಾಧ್ಯಮಗಳು ಹೆಚ್ಚಿನ ನಿಯಂತ್ರಣ ಸಾಧಿಸುವುದು ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

Advertisement

ದ್ವೇಷ ಭಾಷಣ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಕೆ.ಎಂ. ಜೋಸೆಫ್ ಹಾಗೂ ನ್ಯಾಯ ಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠ ಈ ಅಂಶ ಸ್ಪಷ್ಟಪಡಿಸಿದೆ.

ಸಮಾಜಕ್ಕೆ ಪತ್ರಿಕಾ ಸ್ವಾತಂತ್ರ್ಯದ ಅಗತ್ಯದಷ್ಟೇ, ಸಮತೋಲಿತ ಪತ್ರಿಕಾ ರಂಗದ ಅಗತ್ಯವೂ ಇದೆ ಎಂದೂ ಪೀಠ ಪ್ರತಿಪಾದಿಸಿದೆ. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಯ ಪ್ರಕರಣವನ್ನು ಉದಾಹರಣೆ ನೀಡಿದ ಪೀಠ,ಆರೋಪಿ ವಿಚಾರಣೆಗೆ ಒಳಪಟ್ಟಿರು ವಾಗಲೇ ಆತನ ಹೆಸರನ್ನು ಮಾಧ್ಯಮಗಳು ಬಹಿರಂಗ ಪಡಿಸಿವೆ.

ಎಲ್ಲರಿಗೂ ಗೌರವ ಇದೆ ಎಂಬುದನ್ನು ಮಾಧ್ಯಮಗಳು ಅರ್ಥೈಸಿಕೊಂಡು, ಸಮಾಜ ವಿಭಜಿಸಿ ದಂತೆ ನಡೆಯಬೇಕು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next