Advertisement
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾ| ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಈ ತೀರ್ಪನ್ನು ನೀಡಿರುವುದರ ಜತೆಗೆ ಈ ವಿಷಯದಲ್ಲಿ ಸೂಕ್ತ ಮಾದರಿ ನೀತಿಯನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಬೇಕೇ ಬೇಡವೇ, ಯಾರಿಗೆ-ಯಾವಾಗ ರಜೆ ನೀಡಬಹುದು ಇತ್ಯಾದಿ ವಿಷಯಗಳಲ್ಲಿ ನೀತಿ ರೂಪಿಸುವುದು ಸರಕಾರ, ಆರೋಗ್ಯ ಇಲಾಖೆಗಳ ಕಾರ್ಯವೇ ವಿನಾ ನ್ಯಾಯಾಲಯ ಅದನ್ನು ತೀರ್ಪಾಗಿ ಹೇಳುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿರುವುದು ಸೂಕ್ತವಾಗಿಯೇ ಇದೆ.
Related Articles
Advertisement
ಸುಪ್ರೀಂ ಕೋರ್ಟ್ ಹೇಳಿರುವ ಅಂಶಗಳು ಮಾತ್ರ ಅಲ್ಲದೆ ಮುಟ್ಟಿನ ರಜೆಯನ್ನು ಕಡ್ಡಾಯ ಮಾಡಿದರೆ ಅದರಿಂದ ಇನ್ನಿತರ ಹಲವು ರೀತಿಗಳಲ್ಲಿಯೂ ಸ್ತ್ರೀಯರಿಗೆ ತೊಂದರೆ ಆಗಬಹುದಾದ ಸಾಧ್ಯತೆಗಳಿವೆ. ಪ್ರತೀ ಮಹಿಳೆ ಯಾವಾಗ ಋತುಸ್ರಾವ ಹೊಂದುತ್ತಾಳೆ ಎಂಬುದು ಉದ್ಯೋಗ ಸ್ಥಳದಲ್ಲಿ ಈ ಮೂಲಕ ಬಹಿರಂಗವಾಗುವ ಸಾಧ್ಯತೆಗಳಿವೆ. ಇದರಿಂದ ಆಗಬಲ್ಲ ಮುಜುಗರ ಮತ್ತಿತರ ತೊಂದರೆಗಳಿವೆ. ಅದರಿಂದ ಆಕೆಯ ಖಾಸಗಿತನದ ಹಕ್ಕು ಉಲ್ಲಂಘನೆಯಾಗಬಹುದಾಗಿದೆ.
ಋತುಸ್ರಾವದ ಸಮಯದಲ್ಲಿ ಉದ್ಯೋಗ ನಿರ್ವಹಿಸಬೇಕೇ, ಬೇಡವೇ; ಆ ಸ್ಥಿತಿಯಲ್ಲಿ ಆಕೆ ಇದ್ದಾಳೆಯೇ ಇಲ್ಲವೇ ಎಂಬಿತ್ಯಾದಿ ಹಲವು ವಿಷಯಗಳು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರು ತ್ತವೆಯಾದ್ದರಿಂದ ಇಂಥವನ್ನೆಲ್ಲ ಕಡ್ಡಾಯದ ಅಡಿ ತರುವುದು ಅಸಾಧ್ಯ. ಕೇಂದ್ರ ಸರಕಾರವು ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ ಕಾರಗಳು, ಆರೋಗ್ಯ ಇಲಾಖೆಯಂತಹ ಭಾಗೀದಾರರ ಸಲಹೆ-ಸೂಚನೆ ಗಳನ್ನು ಪಡೆದು ಈ ವಿಷಯದಲ್ಲಿ ಯೋಗ್ಯ ನೀತಿಯನ್ನು ಇನ್ನೀಗ ರೂಪಿಸಬೇಕಾಗಿದೆ.