Advertisement
ನ್ಯಾ| ಆರ್.ಎಸ್. ನಾರಿಮನ್ ನೇತೃತ್ವದ ನ್ಯಾಯಪೀಠ ಆರ್‌ಬಿಐ ಸುತ್ತೋಲೆಯಲ್ಲಿ ನೀಡಿದ್ದ ಆದೇಶ ಕೇವಲ ಆಂಶಿಕವಾಗಿದೆ. ಹೀಗಾಗಿ ಅದನ್ನು ಒಪ್ಪಲಾಗದು ಎಂದಿತು. ಆರ್‌ಬಿಐ ವರ್ಚುವಲ್ ಕರೆನ್ಸಿ ಮೇಲೆ ನಿಷೇಧ ಹೇರಿಲ್ಲ ಎಂದು ಹೇಳುತ್ತಾ ಬಂದಿದೆ ಮತ್ತು ಕೇಂದ್ರ ಸರಕಾರ ಕೂಡ ಹಲವು ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸಿನ ಆಧಾರದಲ್ಲಿ ಅದರಲ್ಲಿ ಎರಡು ಕರಡು ಮಸೂದೆಗಳು ಸೇರಿ ಈ ಕ್ಷೇತ್ರದ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲೂ ವಿಫಲವಾಗಿದೆ. ಹೀಗಾಗಿ ನ್ಯಾಯಪೀಠ ಆಂಶಿಕವಾಗಿರುವ ನಿಯಮದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು 180 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
- ಸಮಾನ ಅವಕಾಶ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಂದೇಶ ರವಾನೆಯಾಗಿದೆ.
Related Articles
Advertisement
- ವ್ಯವಸ್ಥೆಯ ನಿಯಂತ್ರಕರು (ಆರ್‌ಬಿಐ) ಹೊಸ ವ್ಯವಸ್ಥೆಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಬೇಕು, ಯಾವ ರೀತಿ ಅವುಗಳನ್ನು ನಿಯಂತ್ರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
- ನಿಯಂತ್ರಣ ಎನ್ನುವುದು ಒಂದು ಸಂಸ್ಥೆಯ ಪರಮಾಧಿಕಾರವಲ್ಲ; ಅದು ಕರ್ತವ್ಯ. ಸದ್ಯ ಭಾರತದಲ್ಲಿ ಒಂದೇ ನಿಯಂತ್ರಣ ವ್ಯವಸ್ಥೆ ಇದೆ. ಅದಕ್ಕೆ ಹೊಸ ವ್ಯವಸ್ಥೆ ಬೆಳವಣಿಗೆ ಸಾಧಿಸಬಾರದು ಎಂಬಂಥ ನಿಯಮ ತರುವಂತಾಗ ಬಾರದು. ನಿಯಂತ್ರಣಕ್ಕೆ ಸಮಸ್ಯೆ ಎಂಬ ನೆಪಕ್ಕಾಗಿ ಹೊಸ ವ್ಯವಸ್ಥೆ ಅಭಿವೃದ್ಧಿಗೆ ಮುಳ್ಳಾಗಬಾರದು.
ಆರ್‌ಬಿಐ ಸುತ್ತೋಲೆಯಲ್ಲಿ ಏನಿತ್ತು?– ಆರ್‌ಬಿಐ ವರ್ಚುವಲ್ ಕರೆನ್ಸಿ (ವಿಸಿ) ಮೂಲಕ ವಹಿವಾಟು ನಡೆಸುವುದಿಲ್ಲ. ಇದರ ಜತೆಗೆ ಇತರ ಸಂಸ್ಥೆಗಳು, ವ್ಯಕ್ತಿಗಳೂ ಕೂಡ ಅದರ ಮೂಲಕ ವಹಿವಾಟು, ಸೇವೆ ನೀಡುವ ಅಗತ್ಯವಿಲ್ಲ. – ಅದರಲ್ಲಿ ಖಾತೆಗಳ ನಿರ್ವಹಣೆ, ನೋಂದಣಿ, ಟ್ರೇಡಿಂಗ್, ವ್ಯವಹಾರ ಇತ್ಯರ್ಥಪಡಿಸುವುದು, ವರ್ಚುವಲ್ ಟೋಕನ್‌ಗಳ ಆಧಾರದಲ್ಲಿ ಸಾಲ ನೀಡಿಕೆ, ಟೋಕನ್‌ಗಳನ್ನು ಭದ್ರತೆಯಾಗಿ ಪಡೆದುಕೊಳ್ಳುವುದು, ಖಾತೆಗಳನ್ನು ತೆರೆಯುವುದು ಬೇಡ. – ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟ ಸಂಸ್ಥೆ ಗಳೆಲ್ಲವೂ ಮೂರು ತಿಂಗಳ ಒಳಗಾಗಿ ವಿ.ಸಿ. ವ್ಯವಹಾರದಿಂದ ದೂರ ಸರಿಯಬೇಕು. ಕ್ರಿಪ್ಟೋಕರೆನ್ಸಿ ಎಂದರೇನು?
– ಅತ್ಯಂತ ಸರಳ ಭಾಷೆಯಲ್ಲಿ ವಿವರಿಸುವುದಿದ್ದರೆ ಡಿಜಿಟಲ್ ಕರೆನ್ಸಿ. ಇಂಟರ್‌ನೆಟ್ ಮಾಧ್ಯಮದ ಮೂಲಕ ಅದನ್ನು ಬಳಕೆ ಮಾಡಲಾಗುತ್ತದೆ. ಅದನ್ನು ವಿನಿಮಯದ ಮಾಧ್ಯಮವಾಗಿ ಉಪಯೋಗಿಸುತ್ತಾರೆ. – ಕಾನೂನಾತ್ಮಕವಾಗಿ ಸದ್ಯ ಅದಕ್ಕೆ ಮಾನ್ಯತೆ ಇಲ್ಲ. ಅಂದರೆ ಭಾರತದ ಮಟ್ಟಿಗೆ ಹೇಳು ವು ದಾದರೆ, ಆರ್‌ಬಿಐ ಮತ್ತು ಇತರ ಸರಕಾರಿ ಸಂಸ್ಥೆಗಳಿಂದ ಮಾನ್ಯತೆ ಇಲ್ಲ. – ಅದನ್ನು ಕ್ರಿಪ್ಟೋಗ್ರಫಿ (Cryptography) ಮೂಲಕ ರಕ್ಷಿಸಲಾಗುತ್ತದೆ. ಕ್ರಿಪ್ಟೋಗ್ರಫಿ ಎಂದರೆ ಸಂಕೇತಗಳ ಮೂಲಕ ಮಾಹಿತಿ ಮತ್ತು ವ್ಯವಹಾರಗಳ ಮಾಹಿತಿಯನ್ನು ರಕ್ಷಿಸುವುದು. ಹೀಗಾಗಿ ಕ್ರಿಪ್ಟ್’ (Crypt) ಎಂದರೆ “ಅಡಗಿಸಿದ’, “ಗ್ರಫಿ’ (graphy) ಎಂದರೆ “ಬರೆಯುವುದು’ ಎಂಬ ಅರ್ಥ. ಬಿಟ್ ಕಾಯಿನ್ ದರ
ಒಂದು ಬಿಟ್ ಕಾಯಿನ್ ಎಂದರೆ 6,42,656 ರೂ.